alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನಾನ ಮಾಡಿಸುವಾಗ ಬಯಲಾಯ್ತು ಆಕೆಯ ಅಸಲಿಯತ್ತು

crime-pix

ವಿಜಯಪುರ: ಶಿಕ್ಷಕರೊಬ್ಬರು ಪತ್ನಿಯ ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಅಂತ್ಯಸಂಸ್ಕಾರಕ್ಕೆ ಅವರ ಸ್ವಗ್ರಾಮಕ್ಕೆ ಶವ ತರಲಾಗಿತ್ತು. ಸ್ನಾನ ಮಾಡಿಸುವ ಸಂದರ್ಭದಲ್ಲಿ ಶವದ ಮರ್ಮಾಂಗ ಸೇರಿದಂತೆ ವಿವಿಧ ಕಡೆಗಳಲ್ಲಿ ಗಾಯದ ಗುರುತು ಕಂಡು ಬಂದಿದ್ದರಿಂದ ಗ್ರಾಮಸ್ಥರು ಅನುಮಾನಗೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಹೊರ್ತಿ ಠಾಣೆ ಪೊಲೀಸರು ತನಿಖೆ ಕೈಗೊಂಡಾಗ ಪತ್ನಿಯೇ ತನ್ನ ತಂದೆ, ಸಹೋದರರೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಶಿಕ್ಷಕರು ಶಾಲೆಯಲ್ಲಿ ಮಾತ್ರವಲ್ಲದೇ ಗ್ರಾಮದಲ್ಲಿಯೂ ಉತ್ತಮ ಹೆಸರು ಗಳಿಸಿದ್ದರು. ಪತ್ನಿಯ ಅಪ್ಪ ಸಾಲ ತೀರಿಸಲು ಹಣ ಕೊಡುವಂತೆ ಪೀಡಿಸುತ್ತಿದ್ದನಲ್ಲದೇ, ಪತ್ನಿ ಕೂಡ ತನ್ನ ತಂದೆಗೆ ಹಣ ಕೊಡುವಂತೆ ಒತ್ತಾಯಿಸಿದ್ದಳು. ತಮ್ಮ 7 ಎಕರೆ ಜಮೀನು ಮಾರಿ ಮಾವ ಮಾಡಿದ್ದ 20 ಲಕ್ಷ ಸಾಲವನ್ನು ಶಿಕ್ಷಕ ತೀರಿಸಿದ್ದರು.

ಆದರೂ ಅವರ ಹಣದ ದಾಹ ಕಡಿಮೆಯಾಗಿಲ್ಲ. ಪತ್ನಿ ತವರಲ್ಲಿ ಇದ್ದ ಕಾರಣಕ್ಕೆ ನೋಡಲು ಬಂದಿದ್ದ ಶಿಕ್ಷಕರಿಗೆ ಮತ್ತೆ ಹಣ ಕೊಡುವಂತೆ ಒತ್ತಾಯಿಸಿದ್ದು, ಅವರು ನಿರಾಕರಿಸಿದಾಗ ಅವನನ್ನೇ ಕೊಂದರೆ ಆಸ್ತಿ ಪೂರ್ಣ ಸಿಗುತ್ತದೆ ಎಂದು ಭಾವಿಸಿ ಪತ್ನಿ, ಆಕೆಯ ತಂದೆ, ಸಹೋದರರು ಹಾಗೂ ಸಂಬಂಧಿಕರು ಸೇರಿ ಶಿಕ್ಷಕನನ್ನು ಕುತ್ತಿಗೆ ಬಿಗಿದು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...