alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಸಿ ಮದುವೆಯಾದವಳಿಂದಲೇ ನಡೆಯಿತು ಆ ಕೃತ್ಯ

Murder nm 9

ಭದ್ರಾವತಿ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಪತ್ನಿಯೇ ಗಂಡನನ್ನು ಹತ್ಯೆ ಮಾಡಿದ ಘಟನೆ ಭದ್ರಾವತಿಯಲ್ಲಿ ನಡೆದಿದೆ. 35 ವರ್ಷದ ಶಾಲಾ ಶಿಕ್ಷಕ ಮೃತಪಟ್ಟವರು. ಆತನ ಪತ್ನಿಯೂ ಶಿಕ್ಷಕಿಯಾಗಿದ್ದು, ಸಮೀಪದ ಗ್ರಾಮದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

6 ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮುಸ್ಲಿಂ ಶಿಕ್ಷಕ ಹಾಗೂ ಹಿಂದೂ ಶಿಕ್ಷಕಿ ಪ್ರೀತಿಸಿ, ಮದುವೆಯಾಗಿದ್ದರು. ಎರಡೂ ಮನೆಯವರ ವಿರೋಧವಿತ್ತು. ಆ ನಂತರ ದಂಪತಿಗೆ ಗಂಡು ಮಗು ಜನಿಸಿದ್ದು, ಮನೆಯವರೂ ಕೂಡ ಹೊಂದಿಕೊಂಡು ಅನ್ಯೋನ್ಯವಾಗಿದ್ದರು. ಈ ನಡುವೆ ಶಿಕ್ಷಕಿ ಭದ್ರಾವತಿ ತಾಲ್ಲೂಕಿನ ಗ್ರಾಮವೊಂದಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದು, ಶಿಕ್ಷಕನೂ ಸೊರಬ ತಾಲ್ಲೂಕಿನ ಶಾಲೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ರಜೆ ಇದ್ದ ಸಂದರ್ಭದಲ್ಲಿ ಭದ್ರಾವತಿಯಲ್ಲಿದ್ದ ಪತ್ನಿ ಮನೆಗೆ ಶಿಕ್ಷಕ ಬಂದು ಹೋಗುತ್ತಿದ್ದ. ರಂಜಾನ್ ರಜೆ ಇದ್ದ ಕಾರಣ ಗುರುವಾರ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಇದರಿಂದ ಸಿಟ್ಟಾದ ಶಿಕ್ಷಕ ಪತ್ನಿ ಕೆನ್ನೆಗೆ ಹೊಡೆದಿದ್ದಾರೆ.

ಆಕೆಯೂ ರಾಡಿನಿಂದ ತಲೆಗೆ ಹೊಡೆದ ಕಾರಣ, ಶಿಕ್ಷಕ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾರೆ. ಏನು ಮಾಡಬೇಕೆಂದು ತಿಳಿಯದ ಶಿಕ್ಷಕಿ, ಸಂಬಂಧಿಯೊಬ್ಬರನ್ನು ಕರೆಸಿಕೊಂಡು, ಗಂಡನನ್ನು ಭದ್ರಾ ನದಿಗೆ ಎಸೆದಿದ್ದಾರೆ. ಈ ಸಂಬಂಧ ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...