alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಕರನೊಂದಿಗೆ ಸೇರಿ ಮಗನನ್ನೇ ಕೊಂದ ಮಹಾ ತಾಯಿ

pune murder

ತಾಯಿಯನ್ನು ಮಮತಾಮಯಿ ಎನ್ನುತ್ತಾರೆ. ಆದರೆ, ತಾಯಿ ಎಂಬ ಪದಕ್ಕೆ ಅಪವಾದ ಎನ್ನುವಂತಹ ಪಾಪದ ಕೆಲಸವನ್ನು ಇಲ್ಲೊಬ್ಬಳು ಮಾಡಿದ್ದಾಳೆ. ಗಂಡನಿಂದ ದೂರವಾಗಿದ್ದ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಪುತ್ರನನ್ನೇ ಕೊಲೆ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ.

40 ವರ್ಷ ವಯಸ್ಸಿನ ದೆಹಲಿ ಮೂಲದ ಮಹಿಳೆ ಗಂಡನಿಂದ ವಿಚ್ಛೇದನ ಪಡೆದುಕೊಂಡಿದ್ದು, ಪತಿಯಿಂದ ದೂರವಾಗಿದ್ದಳು. ಆಕೆಗೆ 13 ವರ್ಷದ ಮಗ ಸೇರಿದಂತೆ ಮೂವರು ಮಕ್ಕಳಿದ್ದಾರೆ. ಇಬ್ಬರು ಮಕ್ಕಳು ಆಕೆಯ ಸಹೋದರಿಯ ಜೊತೆಗಿವೆ. ಮಗ, ಮಹಿಳೆಯ ತಂದೆಯೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದ. ಮೊದಲಿಗೆ ದೆಹಲಿಯಲ್ಲೇ ಇದ್ದ ಮಹಿಳೆ ಬಳಿಕ 33 ವರ್ಷದ ಯೂನಸ್ ರೆಹಮತ್ ಅಲಿ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ದೆಹಲಿಯಿಂದ ಪುಣೆಗೆ ಬಂದು ನೆಲೆಸಿದ್ದಳು.

ಈ ನಡುವೆ ದೆಹಲಿಯಲ್ಲಿ ತನ್ನ ತಂದೆಯ ಜೊತೆಗಿದ್ದ ಮಗನನ್ನು ಹೇಳದೆ, ಕೇಳದೆ ಪುಣೆಗೆ ಕರೆದುಕೊಂಡು ಬಂದಿದ್ದಾಳೆ. ಅಲ್ಲಿ ತಂದೆ ಹುಡುಕಾಟ ನಡೆಸಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಇತ್ತ ಪುಣೆಯಲ್ಲಿ ಪ್ರಿಯಕರನೊಂದಿಗೆ ವಾಸವಾಗಿದ್ದ ಮಹಿಳೆಗೆ ಅದೇನಾಯ್ತೋ ಮಗನನ್ನು ಕೊಂದು ಮನೆಯೊಳಗೇ ಹೂತು ಹಾಕಿದ್ದಾಳೆ. ಕೆಲದಿನಗಳ ನಂತರ ಅಂದರೆ ಕಳೆದ ಡಿಸೆಂಬರ್ 24ರಂದು ಮಹಿಳೆಯ ಪ್ರಿಯಕರ ಆಕೆಯ ತಂದೆಗೆ ಫೋನ್ ಮಾಡಿ, ಮಗ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಮನೆಯೊಳಗೇ ಹೂತುಹಾಕಿದ್ದೇವೆ ಎಂದು ಹೇಳಿದ್ದಾನೆ.

ಆಕೆಯ ತಂದೆ ದೆಹಲಿ ಪೊಲೀಸರಿಗೆ ತನ್ನ ಮೊಮ್ಮಗನನ್ನು ಕೊಲೆ ಮಾಡಿ ಮನೆಯೊಳಗೆ ಹೂತು ಹಾಕಿದ್ದಾಗಿ ತಿಳಿಸಿದ್ದು, ದೆಹಲಿ ಹಾಗೂ ಪುಣೆ ಪೊಲೀಸರು ಇಷ್ಟು ದಿನಗಳ ತನಿಖೆ, ಹುಡುಕಾಟದ ನಂತರ ಪುಣೆಯ ಮನೆಯಲ್ಲಿ ಹೂತುಹಾಕಿದ್ದ ಬಾಲಕನ ಶವ ಪತ್ತೆಹಚ್ಚಿದ್ದಾರೆ. ಆದರೆ ಮಹಿಳೆ, ಆಕೆಯ ಪ್ರಿಯಕರ ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...