alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆ, ಚಿಕ್ಕಪ್ಪನಿಂದಲೇ ನಡೀತು ಘೋರ ಕೃತ್ಯ

ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಮಟ್ಲ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಆತನ ತಂದೆ ಹಾಗೂ ಚಿಕ್ಕಪ್ಪ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ನವೀನ್(28) ಕೊಲೆಯಾದ ಯುವಕ. ತಂದೆ ಮಂಜುನಾಥ್, ಚಿಕ್ಕಪ್ಪ ರಾಘವೇಂದ್ರ ಅವರು ಕೊಲೆ ಆರೋಪಿಗಳಾಗಿದ್ದಾರೆ. ಭಾನುವಾರ ರಾತ್ರಿ ಊಟ ಮಾಡುವ ಸಂದರ್ಭದಲ್ಲಿ ತಂದೆಯೊಂದಿಗೆ ನವೀನ್ ಜಗಳವಾಡಿದ್ದು, ಅದು ವಿಕೋಪಕ್ಕೆ ತಿರುಗಿದೆ.

ಈ ವೇಳೆ ಆಕ್ರೋಶಗೊಂಡ ಮಂಜುನಾಥ್ ಹಾಗೂ ರಾಘವೇಂದ್ರ ಚಾಕುವಿನಿಂದ ಇರಿದಿದ್ದು, ಸ್ಥಳದಲ್ಲೇ ನವೀನ್ ಸಾವು ಕಂಡಿದ್ದಾರೆ. ಮೃತನ ಪತ್ನಿ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...