alex Certify
ಕನ್ನಡ ದುನಿಯಾ       Mobile App
       

Kannada Duniya

ನಡೆಯಬಾರದ ಘಟನೆ ಶಾಲೆಯಲ್ಲೇ ನಡೀತು

mur 19 nm mar

ಹುಮ್ನಾಬಾದ್: ಶಾಲೆಯನ್ನು ವಿದ್ಯಾದೇಗುಲ ಎನ್ನುತ್ತಾರಾದರೂ, ಕೆಲವೊಮ್ಮೆ ನಡೆಯಬಾರದ ಘಟನೆಗಳು ನಡೆದ ಬಗ್ಗೆ ಕೇಳೀರುತ್ತೀರಿ. ಅಂತಹ ಪ್ರಕರಣಗಳಿಗೆ ಮತ್ತೊಂದು ಸೇರ್ಪಡೆ ಎನ್ನಬಹುದಾದ ಘಟನೆ ಹುಮ್ನಾಬಾದ್ ನಲ್ಲಿ ನಡೆದಿದೆ.

ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿರುವ ಖಾಸಗಿ ಶಾಲೆಯಲ್ಲಿಯೇ, ನೌಕರನೊಬ್ಬನನ್ನು ಆತನ ಸಹೋದ್ಯೋಗಿಯೇ ಹತ್ಯೆ ಮಾಡಿದ ಘಟನೆ ನಡೆದಿದೆ. ಶಾಲೆಯಲ್ಲಿ ಗುಮಾಸ್ತನಾಗಿದ್ದ ನೌಕರ ಕೊಲೆಯಾದವ. ಅದೇ ಶಾಲೆಯಲ್ಲಿ ಬೇರೆ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇವರಿಬ್ಬರ ನಡುವೆ ಆಗಾಗ ಶಾಲೆಯಲ್ಲಿಯೇ ಜಗಳವಾಗುತ್ತಿತ್ತು. ಇಬ್ಬರ ನಡುವೆ ದ್ವೇಷವಿದ್ದ ಕಾರಣ ಸಣ್ಣಪುಟ್ಟ ವಿಷಯಗಳಿಗೂ ಶಾಲೆಯಲ್ಲಿ ಜಗಳವಾಡಿಕೊಳ್ಳುತ್ತಿದ್ದರು.

ಶಾಲೆ ವೇಳೆಯಲ್ಲಿಯೇ ಯಾವುದೋ ಕಾರಣಕ್ಕೆ ಜಗಳ ಆರಂಭವಾಗಿ ವಿಕೋಪಕ್ಕೆ ತಿರುಗಿದ್ದು, ಈ ಸಂದರ್ಭದಲ್ಲಿ ದುರಂತವೇ ನಡೆದಿದೆ. ಕೊಲೆ ಮಾಡಿದ ಆರೋಪಿ ಸೀದಾ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಹುಮ್ನಾಬಾದ್ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...