alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡಿಗೆ ನೆಪದಲ್ಲಿ ಮನೆ ಮಾಲೀಕನ ಭೀಕರ ಹತ್ಯೆ

murd-tt

ಚಿಕ್ಕಬಳ್ಳಾಪುರ: ಮನೆ ಬಾಡಿಗೆ ಪಡೆಯುವ ನೆಪದಲ್ಲಿ ಮನೆಗೆ ಬಂದ ದುಷ್ಕರ್ಮಿಗಳು, ಮಾಲೀಕನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ನಗರದ ಹೆಚ್.ಎಸ್. ಗಾರ್ಡನ್ ನಿವಾಸಿ 59 ವರ್ಷದ ವೆಂಕಟಸ್ವಾಮಿ ಹತ್ಯೆಯಾದವರು. ಇವರ ಮನೆಯೊಂದು ಖಾಲಿ ಇದ್ದು, ಅದನ್ನು ಬಾಡಿಗೆ ಪಡೆಯುವುದಾಗಿ ಹೇಳಿ ಬಂದ ದುಷ್ಕರ್ಮಿಗಳು, ಮನೆ ನೋಡಲು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಕುತ್ತಿಗೆ ಹಾಗೂ ಹೊಟ್ಟೆಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ವೆಂಕಟಸ್ವಾಮಿ ಬಹು ಹೊತ್ತಿನವರೆಗೂ ಬಾರದ ಕಾರಣ, ಅವರ ಪುತ್ರ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.

ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...