alex Certify
ಕನ್ನಡ ದುನಿಯಾ       Mobile App
       

Kannada Duniya

ಅನಾಹುತಕ್ಕೆ ಕಾರಣವಾಯ್ತು ಅನೈತಿಕ ಸಂಬಂಧ

Murder a7

ಅನೈತಿಕ ಸಂಬಂಧದಿಂದ ಏನೆಲ್ಲಾ ಅವಾಂತರಗಳಾಗುತ್ತವೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ಕಂಡಿರುತ್ತೀರಿ. ಅನೈತಿಕ ಸಂಬಂಧದಿಂದ ಕೆಲವೊಮ್ಮೆ ಜೀವವನ್ನೇ ಕಳೆದುಕೊಂಡ ಘಟನೆಗಳು ನಡೆದಿವೆ. ಅಂತಹ ಒಂದು ಪ್ರಕರಣದ ವರದಿ ಇಲ್ಲಿದೆ.

ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಗಂಗಮ್ಮನ ಗುಡಿ ಸಮೀಪದ ಅಬ್ಬಿಗೆರೆ ಎಂಬಲ್ಲಿ ತಡರಾತ್ರಿ ಘಟನೆ ನಡೆದಿದೆ. ತುಮಕೂರು ಮೂಲದ ಮಹಿಳೆಗೆ 5 ವರ್ಷದ ಹಿಂದೆ ಮದುವೆಯಾಗಿದ್ದು, ಗಂಡನನ್ನು ತೊರೆದು ರಾಮೇಗೌಡ ಎಂಬುವವನೊಂದಿಗೆ ವಾಸವಾಗಿದ್ದಳು. ಅಬ್ಬಿಗೆರೆಯಲ್ಲಿ ರಾಮೇಗೌಡನೊಂದಿಗೆ ವಾಸವಿದ್ದ ಮಹಿಳೆ, ಆತನಲ್ಲದೇ ಬೇರೆಯವನೊಂದಿಗೂ ಅನೈತಿಕ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ.

ಇದನ್ನು ತಿಳಿದ ರಾಮೇಗೌಡ ಹಲವು ಬಾರಿ ತಿಳಿಹೇಳಿದ್ದರೂ, ಕೇಳದ ಕಾರಣ, ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...