alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಲೆಗೆ ಕಾರಣವಾಯ್ತು ಜೂಜಾಟದ ಜಗಳ

card ispit

ಜೂಜು ಮನೆ ಮಠ ಹಾಳು ಮಾಡುತ್ತದೆ ಎಂಬುದು ಗೊತ್ತಿದ್ದರೂ, ಕೆಲವರು ಜೂಜಾಡುವುದನ್ನೇ ರೂಢಿಸಿಕೊಂಡಿರುತ್ತಾರೆ. ಹೆಚ್ಚಿನ ಸಮಯವನ್ನು ಜೂಜಾಡುವುದರಲ್ಲಿಯೇ ಕಳೆಯುತ್ತಾರೆ. ಹೀಗೆ ಜೂಜಾಡಲು ಹೋದ ಯುವಕನೊಬ್ಬ ಸಾವು ಕಂಡ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕನ್ನಂಪಲ್ಲಿ ಎಂಬಲ್ಲಿ ಜೂಜಾಟದ ಸಂದರ್ಭದಲ್ಲಿ ಜಗಳ ಉಂಟಾಗಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಭಾಗದ ಕೆಲವು ಹಳ್ಳಿಗಳಲ್ಲಿ ಜೋರಾಗಿ ಜೂಜಾಟ ನಡೆಯುತ್ತಿದೆ. ಗ್ರಾಮದ ಹೊರವಲಯಗಳಲ್ಲಿ ಗುಂಪು ಸೇರಿ ಜೂಜಾಟ ನಡೆಸಲಾಗುತ್ತದೆ ಎನ್ನಲಾಗಿದೆ. ಹೀಗೆ ನಡೆಯುತ್ತಿದ್ದ ಜೂಜಾಟ ವಿಕೋಪಕ್ಕೆ ತಿರುಗಿ ಸುಮಾರು 35 ವರ್ಷದ ಕೇಶವ ಎಂಬುವವನನ್ನು ಕೊಲೆ ಮಾಡಲಾಗಿದೆ.

ಜೂಜಾಡುವಾಗ ಬಾಜಿ ಕಟ್ಟಿದ್ದ ಹಣದ ವಿಚಾರಕ್ಕೆ ಸಣ್ಣದಾಗಿ ಆರಂಭವಾದ ಜಗಳ, ವಿಕೋಪಕ್ಕೆ ತಿರುಗಿದ್ದು, ಐವರು ಸೇರಿ ಕೇಶವನನ್ನು ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...