alex Certify
ಕನ್ನಡ ದುನಿಯಾ       Mobile App
       

Kannada Duniya

ಜನತೆಯನ್ನು ಬೆಚ್ಚಿ ಬೀಳಿಸಿದೆ ಲೈವ್ ಮರ್ಡರ್

live-murder

ನಂದ್ಯಾಲ: ಜನನಿಬಿಡ ಪ್ರದೇಶದಲ್ಲಿ ರೌಡಿ ಶೀಟರ್ ಒಬ್ಬನನ್ನು, ಭೀಕರವಾಗಿ ಕೊಲೆ ಮಾಡಿದ ಘಟನೆ ಆಂಧ್ರ ಪ್ರದೇಶದ ನಂದ್ಯಾಲದಲ್ಲಿ ನಡೆದಿದೆ.

ರೌಡಿ ಶೀಟರ್ ರಘು ಕೊಲೆಯಾದವ. ನೂರಾರು ಜನರ ಕಣ್ಣೆದುರಿನಲ್ಲೇ ವ್ಯಕ್ತಿಯೊಬ್ಬ ರಘು ಮೇಲೆ ದಾಳಿ ಮಾಡಿದ್ದು, ರಸ್ತೆಯಲ್ಲೇ ಕೆಳಗೆ ಬಿದ್ದ ರಘುವಿನ ಎದೆಗೆ 5-6 ಬಾರಿ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ.

ಕೆಳಗೆ ಬಿದ್ದ ರಘು ಒದ್ದಾಡುತ್ತಿದ್ದರೂ, ಕನಿಕರ ತೋರದೇ ಇರಿದ ದುಷ್ಕರ್ಮಿ ಅಲ್ಲಿಂದ ಪರಾರಿಯಾಗಿದ್ದಾನೆ.

ಇದನ್ನು ಕಂಡ ಜನ ಗಾಬರಿಯಿಂದ ಓಡಿದ್ದಾರೆ. ಮತ್ತೆ ಕೆಲವರು ದೂರದಿಂದಲೇ ಭೀಕರ ಹತ್ಯೆ ದೃಶ್ಯವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.

ನಂದ್ಯಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸ್.ಪಿ. ರವಿಕೃಷ್ಣ ಅವರು ಆರೋಪಿ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿದ್ದಾರೆ. ಘಟನೆಯಿಂದಾಗಿ ನಂದ್ಯಾಲ ಜನ ಆತಂಕಗೊಂಡಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...