alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಐದು ವರ್ಷದ ಮಗುವಿಗೆ ವಿಷ ಉಣಿಸಿದ ತಾಯಿ

ಕೆಲವೊಮ್ಮೆ ಅಚಾನಕ್ಕಾಗಿ ನಡೆಯುವ ಕೆಲ ತಪ್ಪುಗಳಿಂದ ಜೀವಕ್ಕೆ ಎರವಾಗುತ್ತದೆ ಎನ್ನುವುದಕ್ಕೆ, ಮುಂಬೈನಲ್ಲಿ ‌ಹೃದಯ ವಿದ್ರಾವಕ ಘಟನೆ ಸಾಕ್ಷಿಯಾಗಿದೆ.

ತಾಯಿಯೇ ತನ್ನ ಐದು ವರ್ಷದ ಮಗನಿಗೆ ವಿಷ ಉಣಿಸಿ, ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಆದರೆ ಅದೃಷ್ಟವಶಾತ್ ‌ಆಕೆ ಬದುಕಿದ್ದು, ಮಗ ಕೊನೆಯುಸಿರೆಳೆದಿದ್ದಾನೆ.

ಸೋಮವಾರ ಈ ಘಟನೆ ನಡೆದಿದ್ದು, 34 ವರ್ಷದ ರೀನಾ ಅಯಾರೆ ಎಂಬಾಕೆ‌ ತಾನು‌ ವಿಷ ಸೇವಿಸಿ, ತನ್ನ ಐದು ವರ್ಷದ ಮಗನಿಗೆ ವಿಷ ಉಣಿಸಿದ್ದಾಳೆ. ಆದರೆ ಕೂಡಲೇ ತನ್ನ ತಪ್ಪಿನ ಅರಿವಾಗಿ, ಮುಂಬೈನ ಕೂಪರ್ ಆಸ್ಪತ್ರೆಗೆ ದಾಖಲಿಸಿದ್ದಾಳೆ.

ಆದರೆ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಮಗನಿಗೆ ಚಿಕಿತ್ಸೆ ಫಲಕಾರಿಯಾಗದೇ ಕೊನೆ ಉಸಿರು ಎಳೆದಿದ್ದಾನೆ.

ರೀನಾ ಪತಿ ರಾಜೇಶ್ ಮುಂಬೈನಲ್ಲಿ ಸೆಲ್‌ಫೋನ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮನೆ ನಿರ್ವಹಣೆಗೆ ಹಣ ನೀಡಲು‌ ನಿರಾಕರಿಸಿದ್ದಕ್ಕೆ, ಆತ್ಮಹತ್ಯೆಗೆ ಶರಣಾಗಿದ್ದಾಳೆ‌. ಇದೀಗ‌ ಮಹಿಳೆ ವಿರುಧ್ಧ ಪೊಲೀಸ್ ದೂರು ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...