alex Certify
ಕನ್ನಡ ದುನಿಯಾ       Mobile App
       

Kannada Duniya

ತೊಟ್ಟಿಯಲ್ಲಿತ್ತು ಮಹಿಳೆ ಶವ, ಕಾರಣ ಗೊತ್ತಾ..?

crime gh 58

ಅಜ್ಜಿಯ ಮನೆಗೆ ಬಂದ ಮೊಮ್ಮಗಳಿಗೆ ಕಾಣಿಸಿದ್ದು ರಕ್ತದ ಕಲೆ. ಗಾಬರಿಗೊಂಡ ಮೊಮ್ಮಗಳು ಅಮ್ಮನಿಗೆ ವಿಷಯ ತಿಳಿಸಿದ್ದಾಳೆ. ಎಲ್ಲರೂ ಸೇರಿ ಹುಡುಕಾಡಿದರೂ ಆಕೆ ಕಂಡು ಬಂದಿಲ್ಲ. ಹಲವು ಗಂಟೆಗಳ ಹುಡುಕಾಟದ ನಂತರ ಮನೆಯ ಸಮೀಪ ನೀರಿನ ತೊಟ್ಟಿಯಲ್ಲಿ ಅವರ ಶವ ಪತ್ತೆಯಾಗಿದೆ.

ಹೀಗೆ ಒಂಟಿ ಮಹಿಳೆಯೊಬ್ಬರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಇಲ್ಲಿನ ಮಿಳಘಟ್ಟ ಬಡಾವಣೆಯ ಒಂದನೇ ತಿರುವಿನಲ್ಲಿ ವಾಸವಾಗಿದ್ದ 57 ವರ್ಷದ ಗೌರಮ್ಮ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದಾರೆ. ಕತ್ತಿನಲ್ಲಿದ್ದ ಚಿನ್ನದ ಸರ ಹಾಗೂ ಕಿವಿಯಲ್ಲಿದ್ದ ಆಭರಣ ಅಪಹರಿಸಿದ್ದಾರೆ. ಕಿವಿಯ ಆಭರಣ ದೋಚುವ ರಭಸದಲ್ಲಿ ಮಹಿಳೆಯ ಕಿವಿಯನ್ನೇ ಕತ್ತರಿಸಿದ್ದಾರೆ. ಬಳಿಕ ಶವವನ್ನು ನೀರಿನ ತೊಟ್ಟಿಯಲ್ಲಿ ಹಾಕಿ ಪರಾರಿಯಾಗಿದ್ದಾರೆ.

ಗೌರಮ್ಮ ಅವರು ಶಿವಮೊಗ್ಗದ ಹಾಸ್ಟೆಲ್ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಬಂದ ಅವರನ್ನು ದುಷ್ಕರ್ಮಿಗಳು ಚಿನ್ನದ ಆಸೆಗೆ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...