alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳುವಂತಿದೆ ಬಾಲಕರ ಈ ಕೃತ್ಯ

Murder 123

ಅಪ್ರಾಪ್ತ ವಯಸ್ಸಿನವರು ಎಂತೆಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬುದು ಹಲವಾರು ಘಟನೆಗಳಲ್ಲಿ ಸಾಬೀತಾಗಿದೆ. ಅತ್ಯಾಚಾರ, ಕೊಲೆಯಂತಹ ಅಪರಾಧ ಕೃತ್ಯಗಳಲ್ಲಿ ಅಪ್ರಾಪ್ತರು ಭಾಗಿಯಾದ ಹಿನ್ನಲೆಯಲ್ಲಿ ಬಾಲಾಪರಾಧಿ ವಯಸ್ಸನ್ನು ಇಳಿಕೆ ಮಾಡಲಾಗಿದೆ.

ದೇಶದಲ್ಲಿ ಬಾಲಾಪರಾಧಿಗಳಿಂದ ನಡೆದ ಅಪರಾಧ ಕೃತ್ಯಗಳು ಮತ್ತು ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಬಾಲಾಪರಾಧಿಗಳ ವಯಸ್ಸನ್ನು ಕಡಿಮೆ ಮಾಡಲಾಗಿದೆ. ಇದೆಲ್ಲಾ ಇರಲಿ, ಕ್ಷುಲ್ಲಕ ಕಾರಣಕ್ಕೆ ಚಾಲಕನೊಬ್ಬನನ್ನು ಕೊಲೆ ಮಾಡಿದ ಬಾಲಕರಿಬ್ಬರನ್ನು ನವದೆಹಲಿ ಪೊಲೀಸರು ಬಂಧಿಸಿದ್ದಾರೆ. ಕುಲದೀಪ್ ಠಾಕೂರ್ ಎಂಬ ಟ್ಯಾಕ್ಸಿ ಚಾಲಕನನ್ನು, ನವದೆಹಲಿ ನಜಾಫ್ ಘಡದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ 11ನೇ ತರಗತಿ ವಿದ್ಯಾರ್ಥಿಗಳು, ಕೊಲೆ ಮಾಡಿದ್ದರು.

16 ವರ್ಷದ ಬಾಲಕರಿಬ್ಬರು ಟ್ಯಾಕ್ಸಿಯಲ್ಲಿ ಹೋಗುವ ಸಂದರ್ಭದಲ್ಲಿ, ಕುಲದೀಪ್ ಠಾಕೂರ್ ಅವರನ್ನು ಶೂಟ್ ಮಾಡಿ ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿದ್ದು, 16 ವರ್ಷದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಕೊಲೆ ಮಾಡಿರುವುದು ಗೊತ್ತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...