alex Certify
ಕನ್ನಡ ದುನಿಯಾ       Mobile App
       

Kannada Duniya

ವಿಧವೆ ಜೊತೆಗಿದ್ದ ಗಂಡನ ಕೊಲೆಗೆ ಸುಫಾರಿ

crime nmjklop

ಪತ್ನಿಯೇ ಪತಿಯನ್ನು ಕೊಲೆ ಮಾಡಲು ಸುಫಾರಿ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಘಟನೆಯ ಸಂಬಂಧ ಮೂವರನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ರಾಯದುರ್ಗ ಜಿಲ್ಲೆಯ ಕಲ್ಯಾಂ ಗ್ರಾಮದ ಭಾಗ್ಯಮ್ಮ, ಆಟೋ ಚಾಲಕ ಮುತ್ತಣ್ಣ, ರಫೀಕ್ ಅಹಮದ್ ಬಂಧಿತ ಆರೋಪಿಗಳು.

ಭಾಗ್ಯಮ್ಮ ತನ್ನ ಗಂಡ ನಾಗರಾಜನನ್ನು ಕೊಲೆ ಮಾಡಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ನಾಗರಾಜ ಕೆಲವು ವರ್ಷಗಳ ಹಿಂದೆ ಭಾಗ್ಯಮ್ಮಳನ್ನು ತೊರೆದು ಬಳ್ಳಾರಿಗೆ ಬಂದು ನೆಲೆಸಿದ್ದ. ವಿಧವೆಯೊಬ್ಬರ ಜೊತೆಗೆ ಇದ್ದು, ನಾಗರಾಜ ಕೂಲಿಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿದ್ದ ತನ್ನ ಜಮೀನನ್ನು ಮಾರಲು ಯೋಜಿಸಿದ್ದು, ಅದರಂತೆ ಅಲ್ಲಿಗೆ ಹೋಗಿ ಜಮೀನು ಮಾರಲು ಮುಂದಾಗಿದ್ದಾನೆ. ಇದಕ್ಕೆ ಭಾಗ್ಯಮ್ಮ ವಿರೋಧ ವ್ಯಕ್ತಪಡಿಸಿದ್ದರು. ಆದರೂ, ಆತ ಒಪ್ಪಿರಲಿಲ್ಲ.

ಗಂಡನನ್ನು ಕೊಂದರೆ ಎಲ್ಲಾ ಜಮೀನು ತನಗೇ ಸಿಗುತ್ತದೆ ಎಂದು ಭಾವಿಸಿದ ಭಾಗ್ಯಮ್ಮ ರಫೀಕ್ ಹಾಗೂ ಮುತ್ತಣ್ಣ ಎಂಬವರಿಗೆ 5 ಲಕ್ಷ ರೂ. ಕೊಡುತ್ತೇನೆ, ನಾಗರಾಜನನ್ನು ಕೊಲೆ ಮಾಡಿ ಎಂದು ಸುಫಾರಿ ಕೊಟ್ಟಿದ್ದಾಳೆ. ಬಳ್ಳಾರಿ ಸಮೀಪದಲ್ಲಿ ನಾಗರಾಜನನ್ಜು ಬಡಿಗೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...