alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಲ್ಲೇ ಹಸ್ತಮೈಥುನ: ಕಾಮುಕ ಅರೆಸ್ಟ್

ಮುಂಬೈ: ರೈಲಿನಲ್ಲಿ ಮಹಿಳಾ ಪ್ರಯಾಣಿಕರ ಎದುರಲ್ಲೇ ಹಸ್ತಮೈಥುನ ಮಾಡಿಕೊಂಡ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯೊಬ್ಬರು ಕಾಮುಕನ ನೀಚಕೃತ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದು, ಇದನ್ನಾಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಒಡಿಶಾ ಮೂಲದ 30 ವರ್ಷದ ವ್ಯಕ್ತಿ ಬಂಧಿತ ಆರೋಪಿ. ಶನಿವಾರ ಮುಂಬೈ ರೈಲಿನಲ್ಲಿ ಮಹಿಳೆಯರಿಗೆ ಮೀಸಲಾದ ಬೋಗಿಯಲ್ಲಿ ಮಹಿಳೆ ಪ್ರಯಾಣಿಸುವಾಗ, ಪಕ್ಕದ ಬೋಗಿಯಲ್ಲಿದ್ದ ಕಾಮುಕ ಅನುಚಿತ ವರ್ತನೆ ತೋರಿದ್ದಾನೆ.

ಬಳಿಕ ಅಲ್ಲೇ ಹಸ್ತಮೈಥುನ ಮಾಡಿಕೊಂಡಿದ್ದು, ಆತನ ಕೃತ್ಯವನ್ನು ಸೆರೆ ಹಿಡಿದ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆ ನೀಡಿದ್ದ ವಿಡಿಯೋ ಮತ್ತು ನಿಲ್ದಾಣದ ಸಿ.ಸಿ. ಟಿ.ವಿ. ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...