alex Certify
ಕನ್ನಡ ದುನಿಯಾ       Mobile App
       

Kannada Duniya

ಲಿಫ್ಟ್ ನಲ್ಲಿ ರಾಕ್ಷಸಿಯಂತೆ ವರ್ತಿಸಿದ ಮಹಿಳೆ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಇದೊಂದು ಸಿಸಿ ಟಿವಿ ದೃಶ್ಯವಾಗಿದ್ದು, ಇದ್ರಲ್ಲಿ ಮಹಿಳೆಯೊಬ್ಬಳ ರಾಕ್ಷಸಿ ವರ್ತನೆ ಬಹಿರಂಗವಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ನಾಲ್ಕು ವರ್ಷದ ಮಗುವಿಗೆ ಹೊಡೆದು-ಬೈದು ಮಾಡ್ತಿದ್ದಾಳೆ.

ಇದು ಮುಂಬೈನ ಕಟ್ಟಡವೊಂದರಲ್ಲಿ ನಡೆದ ಘಟನೆ. ಮಗುವನ್ನು ಲಿಫ್ಟ್ ಒಳಗೆ ಕರೆತರುವ ಮಹಿಳೆ ಲಿಫ್ಟ್ ಬಾಗಿಲು ಹಾಕ್ತಾಳೆ. ನಂತ್ರ ಮಗುವಿಗೆ ಮನಸ್ಸಿಗೆ ಬಂದಂತೆ ಥಳಿಸುತ್ತಾಳೆ. ನಂತ್ರ ಲಿಫ್ಟ್ ನಲ್ಲಿ ಸಿಸಿ ಟಿವಿ ಇದೆ ಎಂಬುದು ಮಹಿಳೆ ಗಮನಕ್ಕೆ ಬರುತ್ತದೆ. ಏನು ಮಾಡಿದ್ಲೋ ಗೊತ್ತಿಲ್ಲ. ಕೆಲ ಸಮಯ ಸಿಸಿ ಟಿವಿಯಲ್ಲಿ ಯಾವುದೇ ದೃಶ್ಯ ದಾಖಲಾಗಿಲ್ಲ.

ಮೊದಲು ಕೈ ಹಾಗೂ ಕಾಲಿನಿಂದ ಹೊಡೆಯುವ ಮಹಿಳೆ ಮಗು ಕೆಳಗೆ ಬೀಳ್ತಿದ್ದಂತೆ ಆಕೆ ಮೈಮೇಲೆ ಕುಳಿತುಕೊಳ್ತಾಳೆ. ನಂತ್ರ ಮಗುವಿಗೆ ಬೈದು, ಹೊಡೆಯುತ್ತಾಳೆ. ಮಗು ಕೂಗಿಕೊಳ್ತಿದ್ದಂತೆ ಸಂಬಂಧಿಕರು ಲಿಫ್ಟ್ ಬಳಿ ಬರ್ತಾರೆ. ಲಿಫ್ಟ್ ತೆಗೆಯುವಂತೆ ಕೂಗಿಕೊಳ್ತಾರೆ. ಕೆಲ ಸಮಯದ ನಂತ್ರ ಲಿಫ್ಟ್ ತೆಗೆಯಲು ಯಶಸ್ವಿಯಾದ ಸಂಬಂಧಿಕರು ಮಗುವಿನ ರಕ್ಷಣೆ ಮಾಡ್ತಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...