alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿ ಸಾವಿಗೆ ಕಾರಣವಾಯ್ತು ಮಾಂಸಹಾರ

suicide by hangingಸಸ್ಯಹಾರಿಯಾಗಿದ್ದ ಯುವತಿಯೊಬ್ಬಳಿಗೆ ಆಕೆಯ ಪತಿ ಮಾಂಸಹಾರ ತಿನ್ನುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ ಹಿನ್ನಲೆಯಲ್ಲಿ ನೊಂದ ಆಕೆ ನೇಣಿಗೆ ಶರಣಾಗಿರುವ ಘಟನೆ ಮುಂಬೈ ಹೊರ ವಲಯದಲ್ಲಿ ನಡೆದಿದೆ.

ನಾಲಸೊಪರಾದ 22 ವರ್ಷದ ಪೂಜಾ ಧೀರಜ್, ತನ್ನ ಮನೆಯಲ್ಲೇ ನೇಣು ಹಾಕಿಕೊಂಡು ಸಾವನ್ನಪ್ಪಿದವರಾಗಿದ್ದು, ಆಕೆಯ ಪತಿ ಧೀರಜ್ ಸಸ್ಯಾಹಾರಿಯಾಗಿದ್ದ ಆಕೆಗೆ ಮಾಂಸಹಾರ ತಿನ್ನುವಂತೆ ಬಲವಂತಪಡಿಸುತ್ತಿದ್ದನೆನ್ನಲಾಗಿದೆ.

ಇದರಿಂದ ಬೇಸತ್ತ ಆಕೆ ಪಾಟನ್ಕರ್ ಪಾರ್ಕ್ ರಸ್ತೆಯಲ್ಲಿನ ತನ್ನ ಮನೆಯಲ್ಲಿ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಯುವತಿ ಕುಟುಂಬಸ್ಥರು ಈಗ ನಾಲಸೊಪರಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತಿ ಧೀರಜ್ ನನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...