alex Certify
ಕನ್ನಡ ದುನಿಯಾ       Mobile App
       

Kannada Duniya

ಫೈಂಡ್ ಮೈ ಫೋನ್ ಆಪ್ ಮೂಲಕ ಪತ್ತೆಯಾದ ಕಳ್ಳ

ಆಧುನಿಕ ತಂತ್ರಜ್ಞಾನ ಎನ್ನುವುದು ಕಳ್ಳರಿಗೆ ಹೇಗೆ ವರದಾನವೋ ಹಾಗೆಯೇ ಪೊಲೀಸರಿಗೂ ಕೂಡ. ಫೈಂಡ್ ಮೈ ಫೋನ್ ಮೊಬೈಲ್ ಅಪ್ಲೀಕೇಷನ್ ಉಪಯೋಗಿಸಿ ಜುಹು ಪೊಲೀಸರು ಮೊಬೈಲ್ ಕಳ್ಳನನ್ನು ಸೆರೆಹಿಡಿದಿದ್ದಾರೆ.

19 ವರ್ಷದ ಶಾರುಖ್ ಖಾನ್ ಅಲಿಯಾಸ್ ಸಿಮ್ರಾನ್ ಎಂಬಾತ ರೋಡಿನಲ್ಲಿ ಮಾತನಾಡುತ್ತ ಹೋಗುತ್ತಿದ್ದ ಉದ್ಯಮಿಯೊಬ್ಬರ ಐಫೋನ್ ಎಕ್ಸ್ ಅನ್ನು ಬೈಕಿನಲ್ಲಿ ಬಂದು ಕಿತ್ತುಕೊಂಡು ಪರಾರಿಯಾಗಿದ್ದ. ಈ ಕುರಿತು ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಫೈಂಡ್ ಮೈ ಐಫೋನ್ ಆಪ್ ಮೂಲಕ ಕಳ್ಳನನ್ನು ಟ್ರ್ಯಾಕ್ ಮಾಡಿದರು. ಸಿಸಿ ಟಿವಿಯಲ್ಲೂ ಕೆಟಿಎಂ ಬೈಕ್ ಕಂಡಿತ್ತೇ ವಿನಃ ಕಳ್ಳನ ಮುಖ ಕಂಡಿರಲಿಲ್ಲ. ಕೊನೆಗೂ ಆಪ್ ಮೂಲಕ ಕಳ್ಳನನ್ನು ಪತ್ತೆ ಹಚ್ಚಿದ ಪೊಲೀಸರಿಗೆ ಈತ ಮೊಬೈಲ್ ಕಳ್ಳತನದ ಜೊತೆಗೆ ಬೈಕ್ ಕಳ್ಳತನದಲ್ಲೂ ಭಾಗಿಯಾಗಿದ್ದಾನೆಂಬುದು ತಿಳಿದುಬಂತು. ಕಳ್ಳನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...