alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಜಾಮೀನಿನ ಮೇಲೆ ಹೊರಬಂದ ಅತ್ಯಾಚಾರ‌ ಆರೋಪಿ ಮಾಡಿದ್ದು ಮತ್ತದೇ ಕೆಲಸ

ಮದುವೆಯಾಗುವುದಾಗಿ ನಂಬಿಸಿ 2013ರಲ್ಲಿ ಯುವತಿಯನ್ನು ಅತ್ಯಾಚಾರಗೈದು ಜೈಲಿಗೆ ಹೋಗಿದ್ದ ಆರೋಪಿ, ಜಾಮೀನಿನ ಮೇಲೆ ಬಿಡುಗಡೆಗೊಂಡು ಆಕೆಯ ಮೇಲೆ ಮತ್ತೆ ಅತ್ಯಾಚಾರ ಎಸಗಿದ ಘಟನೆ ಮುಂಬೈನಲ್ಲಿ ನಡೆದಿದೆ.

36 ವರ್ಷ ವಯಸ್ಸಿನ ಆರೋಪಿಯನ್ನು ಬೆದರಿಕೆ, ಅಪಹರಣ ಮತ್ತು ಅತ್ಯಾಚಾರ ಆರೋಪದ ಮೇಲೆ ಪುನಃ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಚಾಕು ತೋರಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಯುವತಿ ಮತ್ತು ಆರೋಪಿ ನೆರೆಹೊರೆಯವರಾಗಿದ್ದು, 2012ರಿಂದ ಪರಿಚಯಸ್ಥರು. ಕೆಲ ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ ಆಕೆಯನ್ನು ಮತ್ತೆ ಭೇಟಿಯಾಗಲು ಪ್ರಯತ್ನಿಸಿದ್ದ. ಆದರೆ ಆಕೆ ನಿರಾಕರಿಸಿದ್ದಳು. ಆದರೆ ಅ.25 ರಂದು ಆತ ಚಾಕು ತೋರಿಸಿ ಆಕೆಯನ್ನು ಬೈಕ್‌ನಲ್ಲಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...