alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬಿ ಬಂದ ಸ್ನೇಹಿತನ ಕತ್ತು ಹಿಸುಕಿ ಕೊಂದರು

ದಿಢೀರ್ ಶ್ರೀಮಂತರಾಗುವ ಕಾರಣಕ್ಕೆ ಹಲವರು ಅಡ್ಡ ಹಾದಿ ಹಿಡಿಯುತ್ತಿದ್ದಾರೆ. ಇಂತಹುದೇ ಒಂದು ಪ್ರಕರಣ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಈರ್ವ ಯುವಕರು ಒತ್ತೆ ಹಣ ಪಡೆಯಲು ಅತ್ಮೀಯ ಸ್ನೇಹಿತನನ್ನೇ ಬಲಿ ಪಡೆದಿದ್ದಾರೆ.

ನವೆಂಬರ್ 8 ರಂದು ಮುಂಬೈನ ಕೋಲ್ಸೆವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 21 ವರ್ಷದ ಮಯೂರ್ ಡೋಲ್ಸೆ ಎಂಬಾತ ನಾಪತ್ತೆಯಾಗಿದ್ದ. ಆತನನ್ನು ಹುಡುಕಿದ ಕುಟುಂಬಸ್ಥರು ಪತ್ತೆಯಾಗದ ಹಿನ್ನಲೆಯಲ್ಲಿ ನವೆಂಬರ್ 11 ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಯೂರ್ ನ ಮೊಬೈಲ್ ಕಾಲ್ ಟ್ರೇಸ್ ಮಾಡಿದ ವೇಳೆ ಅತ ತನ್ನ ಗೆಳತಿಗೆ ಕರೆ ಮಾಡಿದ್ದ ವಿಷಯ ತಿಳಿದುಬಂದಿತ್ತು. ಆಕೆಯನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದಾಗ ಅಪರೂಪಕ್ಕೆ ಸಿಕ್ಕ ತನ್ನ ಬಾಲ್ಯ ಸ್ನೇಹಿತರಾದ ಗೋಕುಲ್ ಹಾಗೂ ಪ್ರಮೋದ್ ರಜಪೂತ್ ಜೊತೆ ಊಟಕ್ಕೆಂದು ಹೊರಗೆ ಹೋಗುತ್ತಿರುವುದಾಗಿ ಹೇಳಿದ್ದ ವಿಷಯ ಬೆಳಕಿಗೆ ಬಂದಿತ್ತು.

ಈ ಮಧ್ಯೆ ನವೆಂಬರ್ 10 ರಂದು ಕಾಡಕ್ಪಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ಅನಾಮಧೇಯ ಶವ ಮಯೂರ್ ನದ್ದೆಂದು ಸಾಬೀತಾಯಿತು. ತಮಗೆ ದೊರೆತ ಮಾಹಿತಿ ಆಧಾರದ ಮೇಲೆ ಗೋಕುಲ್ ಹಾಗೂ ಪ್ರಮೋದ್ ರನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಶಾಕ್ ಆಗುವಂತಹ ಮಾಹಿತಿ ಲಭಿಸಿದೆ.

ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಇವರಿಬ್ಬರು ತಮ್ಮ ಬಾಲ್ಯದ ಗೆಳೆಯ ಮಯೂರ್ ನನ್ನು ಊಟದ ನೆಪದಲ್ಲಿ ಕರೆಸಿಕೊಂಡು ನಿದ್ರೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿದ್ದಲ್ಲದೇ ಕತ್ತು ಹಿಸುಕಿ ಆತನ ಹತ್ಯೆ ಮಾಡಿದ್ದರು. ಆತನ ಅಪಹರಣ ಮಾಡಿರುವುದಾಗಿ ಹೇಳಿ ಮಯೂರ್ ಕುಟುಂಬದಿಂದ 25 ಲಕ್ಷ ರೂ. ಕೀಳಲು ಪ್ಲಾನ್ ಮಾಡಿದ್ದ ಇವರುಗಳು ಭಯದಿಂದ ಅದನ್ನು ಕಾರ್ಯಗತಗೊಳಿಸದೆ ಮಯೂರ್ ನ ಶವವನ್ನು 6 ಕಿ.ಮೀ. ತನಕ ಬೈಕ್ ನಲ್ಲಿ ಸಾಗಿಸಿ ಪೊದೆಯಲ್ಲಿ ಎಸೆದಿದ್ದರು. ಇದೀಗ ಆರೋಪಿಗಳು ಬಂಧನಕ್ಕೊಳಗಾಗಿದ್ದು, ಅತ್ಮೀಯ ಸ್ನೇಹಿತರಿಂದಲೇ ಮಗನನ್ನು ಕಳೆದುಕೊಂಡ ಮಯೂರ್ ಕುಟುಂಬ ಆಘಾತಕ್ಕೊಳಗಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...