alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹಿತೆಯ ಮೊಬೈಲ್ ನಂಬರ್ ಕೇಳಿದ್ದಕ್ಕೆ ಹತ್ಯೆ…!

ವಿವಾಹಿತ ಮಹಿಳೆಯ ಮೊಬೈಲ್ ನಂಬರ್ ಕೇಳಿದ್ದಕ್ಕಾಗಿ 38 ವರ್ಷದ ವ್ಯಕ್ತಿಯನ್ನು ಆಕೆಯ ಗಂಡ ಪತ್ನಿಯೊಂದಿಗೆ ಸೇರಿ ಹತ್ಯೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ

ಮೃತ ವ್ಯಕ್ತಿಯನ್ನು ರಾಕೇಶ್ ಶಿಂಧೆ ಎಂದು ಗುರುತಿಸಲಾಗಿದ್ದು, ಈತನ ನೆರೆಮನೆಯಲ್ಲಿ ವಾಸವಾಗಿದ್ದ ಯಶವಂತ್ ಮತ್ತು ಮೀನಾ ದಂಪತಿಗಳು ಹತ್ಯೆ ಮಾಡಿದ ಆರೋಪಿಗಳಾಗಿದ್ದಾರೆ.

ಸೋಮವಾರ ಬೆಳಗ್ಗೆ ರಾಕೇಶ್, ಯಶವಂತನ ಮನೆಗೆ ಹೋಗಿದ್ದು, ಆತನ ಪತ್ನಿ ಮೀನಾಳ ಬಳಿ ನಿನ್ನ ಮೊಬೈಲ್ ನಂಬರ್ ಕೊಡು ಎಂದು ಕೇಳಿದ್ದಾನೆ. ಅದಕ್ಕೆ ಆಕೆ ನಿರಾಕರಿಸಿದ್ದಾಳೆ.

ತುರ್ತು ಕೆಲಸಕ್ಕೆಂದು ಹೊರಗೆ ಹೋಗಿದ್ದ ಪತಿ ಮನೆಗೆ ಬಂದ ವೇಳೆ ಈ ವಿಚಾರವನ್ನು ತಿಳಿಸಿದ್ದು, ಇದರಿಂದ ಕೋಪಗೊಂಡ ಯಶವಂತ್, ರಾಕೇಶನ ಮನೆಗೆ ನುಗ್ಗಿ ರಾಕೇಶನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದಕ್ಕೆ ಯಶವಂತನ ಪತ್ನಿ ಮೀನಾಳೂ ಸಾಥ್ ನೀಡಿದ್ದಾಳೆ. ಇದರಿಂದ ರಾಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...