alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಸ್ ಪೆಕ್ಟರ್ ಪುತ್ರನ ಸಾವಿಗೆ ಕಾರಣವಾಯ್ತಾ ಡ್ರಗ್ಸ್…?

ಮುಂಬೈನಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರ ಪುತ್ರನ ಮೃತದೇಹ ಸಿಕ್ಕಿದೆ. 20 ವರ್ಷದ ಅಥರ್ವ್ ಶಿಂಧೆ ಎಂಬ ಯುವಕನ ದೇಹವನ್ನ ಗೋರೆಗಾಂವ್ ನಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದಾಗ ಅಥರ್ವ್ ಕೊನೆಯ ಬಾರಿ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದ. ಅಲ್ಲಿ ಕಂಠಪೂರ್ತಿ ಕುಡಿದು, ಡ್ರಗ್ಸ್ ಸೇವಿಸಿದ್ದ ಅಂತಾ ಕೆಲವರು ತಿಳಿಸಿದ್ದಾರೆ.

ಮರಾಠಿ ಚಲನಚಿತ್ರ ಮತ್ತು ಕಿರುತೆರೆ ನಿರ್ಮಾಪಕರೊಬ್ಬರು ತಮ್ಮ ಮಗಳ ಹುಟ್ಟುಹಬ್ಬಕ್ಕೆ ಪಾರ್ಟಿ ಆಯೋಜಿಸಿದ್ರು. ಈ ಪಾರ್ಟಿಯಲ್ಲಿ ಆಲ್ಕೋಹಾಲ್ ಜೊತೆಗೆ ಎಲ್ ಎಸ್ ಡಿ ಎಂಬ ಡ್ರಗ್ಸ್ ನೀಡಲಾಗಿತ್ತು. ಅದನ್ನು ಅಥರ್ವ್ ಸೇವಿಸಿದ್ದ ಅಂತಾ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಅಥರ್ವನ ದೇಹ ಅವರ ತಂದೆಯ ಅಪಾರ್ಟ್ ಮೆಂಟ್ ನಿಂದ 500 ಮೀಟರ್ ದೂರದಲ್ಲಿ ಸಿಕ್ಕಿತ್ತು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ, ಎದೆಯ ಮೇಲಿದ್ದ ಗಾಯ ಅಥರ್ವ್ ಸಾವಿಗೆ ಕಾರಣ ಎಂದು ಹೇಳಲಾಗಿದೆ.

ಆದ್ರೆ ಸಿಸಿ ಟಿವಿಯ ದೃಶ್ಯ ನೋಡಿದಾಗ ಆತ ತುಂಬಾ ಬಳಲಿದಂತೆ ಕಾಣಿಸುತ್ತಿದ್ದ. ಆಟೋರಿಕ್ಷಾ ಹತ್ತಿಕೊಂಡು ಹೋದ ಅಥರ್ವ್ ನನ್ನು ರಿಕ್ಷಾದವನು ಮತ್ತೆ ಅದೇ ಜಾಗಕ್ಕೆ ತಂದು ನಿಲ್ಲಿಸಿ ಹೋಗಿದ್ದಾನೆ. ಇದು ಹಲವು ಅನುಮಾನಗಳನ್ನ ಮೂಡಿಸಿದೆ. ಮತ್ತೊಂದೆಡೆ ಪಾರ್ಟಿ ನಡೆದ ಜಾಗದ ಸಿಸಿ ಟಿವಿ ದೃಶ್ಯಗಳನ್ನು ವೀಕ್ಷಿಸಿದ ವೇಳೆ ಅಲ್ಲಿ ಸೇರಿದ್ದ ಯುವಕರು ಒಬ್ಬರಿಗೊಬ್ಬರು ವಾದ ಮಾಡ್ತಿರೋದು ಕಂಡು ಬಂದಿದೆ. ಆದ್ರೆ ಯಾರೂ ದೈಹಿಕ ಹಲ್ಲೆ ಮಾಡಿದ ದೃಶ್ಯಗಳಿಲ್ಲ. ಆದ್ರೆ ಅಥರ್ವ್ ನ ಸಾವಿನ ನಿಖರ ಕಾರಣ ಹೆಚ್ಚಿನ ತನಿಖೆಯಿಂದ ತಿಳಿಯಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...