alex Certify
ಕನ್ನಡ ದುನಿಯಾ       Mobile App
       

Kannada Duniya

ನವವಿವಾಹಿತೆಯ ಕೊಲೆ ರಹಸ್ಯ ಬೇಧಿಸಿದ ಟ್ಯಾಟೂ

priyanka-gurav-murder-mid-day_650x400_81494827948

ಮುಂಬೈನ ವರ್ಲಿ ಸಿವಾಸಿ ಪ್ರಿಯಾಂಕಾ ಗೌರವ್ ಎಂಬ ಮಹಿಳೆಯ ಛಿದ್ರಗೊಂಡಿದ್ದ ರುಂಡರಹಿತ ದೇಹ ಸಿಕ್ಕು ವಾರದ ಬಳಿಕ ತಲೆಯನ್ನು ಕೂಡ ಪೊಲೀಸರು ಪತ್ತೆ ಮಾಡಿದ್ದಾರೆ. ಶಹರನ್ಪುರ್-ನಾಸಿಕ್ ರಸ್ತೆ ಬದಿಯಲ್ಲಿದ್ದ ಮರವೊಂದರ ಬುಡದಲ್ಲಿ ಬೆಡ್ ಶೀಟ್ ಹಾಗೂ ಕತ್ತರಿಸಿದ ರುಂಡವನ್ನು ಪ್ಲಾಸ್ಟಿಕ್ ಕವರ್ ನಲ್ಲಿಟ್ಟು ದುಷ್ಕರ್ಮಿಗಳು ಎಸೆದು ಹೋಗಿದ್ದರು.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಂಬಿವಿಲಿ ನಿವಾಸಿ ವಿಶಾಲ್ ಸೋನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೇ 5ರಂದು ಪ್ರಿಯಾಂಕಾ ಇದ್ದಕ್ಕಿದ್ದಂತೆ ಕಾಣೆಯಾಗಿದ್ಲು. ಅದಾಗಿ ಒಂದು ದಿನದ ಬಳಿಕ ನವಿ ಮುಂಬೈನ ಕೈಗಾರಿಕಾ ಪ್ರದೇಶದಲ್ಲಿ ಪ್ರಿಯಾಂಕಾಳ ರುಂಡರಹಿತ ದೇಹ ಪತ್ತೆಯಾಗಿತ್ತು. ಆಕೆಯ ಬಲತೋಳಿನ ಮೇಲಿದ್ದ ಓಂ ಗಣೇಶ ಎಂಬ ಟ್ಯಾಟೂ ನೋಡಿ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.

ಆಕೆಯ ಪತಿ ಮತ್ತು ಅತ್ತೆ ಮಾವನೇ ಅವಳನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದರು. ಮನೆಯಿಂದ 48 ಕಿಮೀ ದೂರದಲ್ಲಿ ದೇಹದ ಅಂಗಾಂಗಗಳು ಸಿಕ್ಕಿದ್ದವು. ದುರ್ಗೇಶ್ ಪತ್ವಾ ಎಂಬಾತ ಕೂಡ ದೇಹವನ್ನು ಎಸೆಯಲು ಸಹಾಯ ಮಾಡಿದ್ದ. ಕೊಲೆಯಾಗುವ 5 ದಿನಗಳ ಮೊದಲಷ್ಟೆ ಪ್ರಿಯಾಂಕಾಳ ಮದುವೆಯಾಗಿತ್ತು. ಸಿದ್ದೇಶ್ ಎಂಬಾತನನ್ನು ಪ್ರಿಯಾಂಕಾ ವರಿಸಿದ್ದಳು. ಮದುವೆ ಸಮಯದಲ್ಲೇ ದುರ್ಗೇಶ್ ಎಂಬಾತ ಪ್ರಿಯಾಂಕಾಳನ್ನು ಫಾಲೋ ಮಾಡ್ತಿದ್ದ ಅಂತಾ ಸಂಬಂಧಿಕರು ತಿಳಿಸಿದ್ದಾರೆ. ಪತಿ ಸಿದ್ದೇಶ್ ಮತ್ತು ಆತನ ಹೆತ್ತವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...