alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ನಿಲ್ದಾಣದಲ್ಲಿ 11 ಆಪಲ್ ಐಫೋನ್ ಎಕ್ಸ್ ವಶಕ್ಕೆ ಪಡೆದ ಅಧಿಕಾರಿಗಳು

ಮುಂಬೈ ಕಸ್ಟಮ್ ವಿಭಾಗದ ಏರ್ ಇಂಟೆಲಿಜೆನ್ಸ್ ಯುನಿಟ್ ವ್ಯಕ್ತಿಯೊಬ್ಬನನ್ನು ಬಂಧಿಸಿದೆ. ಈ ವ್ಯಕ್ತಿ ಇತ್ತೀಚಿಗಷ್ಟೇ ಬಿಡುಗಡೆಯಾದ ಆಪಲ್ ಐಫೋನ್ ಎಕ್ಸ್ ನ 11 ಫೋನ್ ಹೊಂದಿದ್ದ ಎನ್ನಲಾಗಿದೆ.

ಭವೇಶ್ ವೈರಾನಿ ಹೆಸರಿನ ವ್ಯಕ್ತಿಯನ್ನು ಎಐಯು ಅಧಿಕಾರಿಗಳು ಬಂಧಿಸಿದ್ದಾರೆ. ಶನಿವಾರ ರಾತ್ರಿ ಈತ ಹಾಂಕಾಂಗ್ ನಿಂದ ಮುಂಬೈಗೆ ಬಂದಿದ್ದ ಎನ್ನಲಾಗಿದೆ. ಭದ್ರತಾ ಸಿಬ್ಬಂದಿ ಬ್ಯಾಗ್ ಪರೀಕ್ಷೆ ವೇಳೆ 11 ಐಫೋನ್ ಎಕ್ಸ್ ಸಿಕ್ಕಿದೆ. ಇಷ್ಟೆಲ್ಲ ಫೋನ್ ಎಲ್ಲಿಂದ ಬಂತು. ಏಕೆ ಈ ಫೋನ್ ತೆಗೆದುಕೊಂಡು ಹೋಗ್ತಿದ್ದ. ಈತನ ಹಿಂದೆ ಗ್ಯಾಂಗ್ ಕೆಲಸ ಮಾಡ್ತಿದೆಯಾ ಎಂಬೆಲ್ಲ ಪ್ರಶ್ನೆಗೆ ಪೊಲೀಸರು ವಿಚಾರಣೆ ನಡೆಸಿ ಉತ್ತರ ಪಡೆಯಲಿದ್ದಾರೆ.

ಆಪಲ್ ಐಫೋನ್ ಎಕ್ಸ್ ಭಾರತದಲ್ಲಿ ನವೆಂಬರ್ 3ರಂದು ಬಿಡುಗಡೆಯಾಗಿದೆ. ಇದ್ರ ಬೆಲೆ ಭಾರತದಲ್ಲಿ 90 ಸಾವಿರದಿಂದ 1 ಲಕ್ಷ ರೂಪಾಯಿ. ಭವೇಶ್ ನಿಂದ  10,50,000 ರೂಪಾಯಿ ಮೌಲ್ಯದ ಫೋನ್ ವಶಕ್ಕೆ ಪಡೆಯಲಾಗಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...