alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣು ಮಗು ಬಯಸಿದ್ದಾಕೆಯಿಂದ ಗಂಡು ಮಗುವಿನ ಹತ್ಯೆ

killತಮಗೆ ಗಂಡು ಮಗುವಾಗಿಲ್ಲವೆಂಬ ಕಾರಣಕ್ಕೆ ಇದುವರೆಗೂ ಹೆಣ್ಣು ಮಕ್ಕಳನ್ನು ಹತ್ಯೆ ಅಥವಾ ಮಾರಾಟ ಮಾಡಿರುವ ಪ್ರಕರಣಗಳ ನಡುವೆ ಅದಕ್ಕೆ ವ್ಯತಿರಿಕ್ತವಾದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಹೆಣ್ಣು ಮಗುವನ್ನು ಬಯಸಿದ್ದ ಮಹಿಳೆಯೊಬ್ಬಳು ಮೂರನೇ ಬಾರಿಯೂ ತನಗೆ ಗಂಡು ಮಗುವಾದ ಕಾರಣ ಆ ಮಗುವನ್ನು ಹತ್ಯೆ ಮಾಡಿದ್ದಾಳೆ.

ಮುಂಬೈನ ನರೆಡ್ಮೇಟ್ ಪ್ರದೇಶದಲ್ಲಿ ವಾಸವಾಗಿರುವ 27 ವರ್ಷದ ಪೂರ್ಣಿಮಾಗೆ ಈ ಹಿಂದೆ ಎರಡು ಗಂಡು ಮಕ್ಕಳು ಜನಿಸಿದ್ದು, ಅದರಲ್ಲಿ ಒಂದು ಮಗು ಮೃತಪಟ್ಟಿತ್ತು. ಗರ್ಭಿಣಿಯಾಗಿದ್ದ ಆಕೆ ತನಗೆ ಈ ಬಾರಿ ಹೆಣ್ಣು ಮಗು ಜನಿಸಬೇಕೆಂದು ಆಶಿಸಿದ್ದಳು. ಲಿಂಗ ಪತ್ತೆ ಪರೀಕ್ಷೆ ಮಾಡಿಸಿಕೊಳ್ಳಲು ಪೂರ್ಣಿಮಾ ಹೋದಾಗ ವೈದ್ಯರು ನಿರಾಕರಿಸಿದ್ದರೆನ್ನಲಾಗಿದೆ.

23 ದಿನಗಳ ಹಿಂದೆ ಪೂರ್ಣಿಮಾ ಮತ್ತೇ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದರಿಂದಾಗಿ ಆಪಾರ ನಿರಾಸೆ ಹೊಂದಿದ್ದಳೆನ್ನಲಾಗಿದೆ. ಮಂಗಳವಾರ ಸಂಜೆ ಮಗುವಿನ ಕುತ್ತಿಗೆ ಇರಿದು ಹತ್ಯೆ ಮಾಡಿದ ಪೂರ್ಣಿಮಾ, ಪೊಲೀಸರಿಗೆ ಸರಗಳ್ಳರು ತನ್ನ ಮೇಲೆ ದಾಳಿ ಮಾಡಿ ಮಗುವನ್ನು ಸಾಯಿಸಿದ್ದಾರೆಂದು ಸುಳ್ಳು ಹೇಳಿದ್ದಾಳೆ. ಆದರೆ ಆಕೆಯ ಹೇಳಿಕೆಗೆ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...