alex Certify
ಕನ್ನಡ ದುನಿಯಾ       Mobile App
       

Kannada Duniya

ಸಕ್ಕರೆ ಚೆಲ್ಲಿದ ಮಗನನ್ನು ಕೊಂದೇ ಬಿಟ್ಲು ಪಾಪಿ ತಾಯಿ

Default

ಚಂಡೀಘಡದಲ್ಲಿ ಹೆತ್ತ ಅಮ್ಮನಿಗೆ ಮಗು ಬೇಡವಾಗಿತ್ತು. ಹಾಗಾಗಿ ಕ್ಷುಲ್ಲಕ ಕಾರಣಕ್ಕೆ ಮಗುವಿಗೆ ಹೊಡೆದು ಸಾಯಿಸಿದ್ದಾಳೆ. ಇಷ್ಟೇ ಅಲ್ಲ, ಗಂಡನಿಂದ ತಪ್ಪಿಸಿಕೊಳ್ಳಲು ಅಪಹರಣದ ನಾಟಕವಾಡಿದ್ದಾಳೆ.

ಘಟನೆ ನಡೆದಿರುವುದು ಚಂಡೀಘಡದ ಸಾರಂಗ್ಪುರದಲ್ಲಿ. ಅಲ್ಲಿನ ಪೊಲೀಸ್ ಠಾಣೆಗೆ ಬಂದು ಮಗು ನಾಪತ್ತೆಯಾಗಿದೆ ಎಂದು ಮಂಜು ಎಂಬಾಕೆ ದೂರು ನೀಡಿದ್ದಾಳೆ. ತನಿಖೆ ವೇಳೆ ತಾಯಿಯೇ ಆರೋಪಿ ಎಂಬುದು ಹೊರಬಿದ್ದಿದೆ. ಎರಡುವರೆ ವರ್ಷದ ಮಗು ಆಟವಾಡ್ತಾ ಸಕ್ಕರೆಯನ್ನು ಚೆಲ್ಲಿದೆಯಂತೆ. ಇದರಿಂದ ಕೋಪಗೊಂಡ ತಾಯಿ ಮಂಜು ಮಗುವಿಗೆ ಹೊಡೆದು ನೂಕಿದ್ದಾಳೆ.

ಗೋಡೆಗೆ ತಲೆ ಹೊಡೆದು ಮಗು ಸತ್ತಿದೆಯಂತೆ. ಗಂಡನ ಹೆದರಿಕೆಯಿಂದ ಮಗುವನ್ನು ಗೋಣಿ ಚೀಲದಲ್ಲಿ ತುಂಬಿ ಕೈಗಾರಿಗಾ ಪ್ರದೇಶಕ್ಕೆ ಎಸೆದು ಬಂದಿದ್ದಾಳೆ ಪಾಪಿ. ನಂತ್ರ ಅಪಹರಣದ ನಾಟಕವಾಡಿದ್ದಾಳೆ.

ತಾಯಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಬಡತನದಿಂದಮ ನೊಂದಿದ್ದ ಮಹಿಳೆ ಹೀಗೆ ಮಾಡಿದ್ದಾಳೆ ಎನ್ನಲಾಗಿದೆ. ಮಹಿಳೆಗೆ ಎರಡು ಹೆಣ್ಣು ಹಾಗೂ ಎರಡು ಗಂಡು ಮಕ್ಕಳಿದ್ದಾರೆ. ಅದ್ರಲ್ಲಿ ಚಿಕ್ಕ ಮಗುವನ್ನು ಪಾಪಿ ತಾಯಿ ಕೊಲೆಗೈದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...