alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿ ರುಂಡ ಕಡಿದು ಪೂಜೆ ಮಾಡಿದ ಪುತ್ರ

ctd-hile

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗೊಲ್ಲರಹಟ್ಟಿಯಲ್ಲಿ ಭೀಕರ ಹತ್ಯೆಯೊಂದು ನಡೆದಿದೆ.

ವ್ಯಕ್ತಿಯೊಬ್ಬ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿದ್ದಾನೆ. ಸಾವಿತ್ರಮ್ಮ(60) ಕೊಲೆಯಾದವರು.

ಆಕೆಯ ಪುತ್ರ ತಿಮ್ಮರಾಜು, ರಾತ್ರಿ ತಾಯಿಯ ರುಂಡವನ್ನು ಕಡಿದು ಹತ್ಯೆ ಮಾಡಿದ್ದು, ರುಂಡವನ್ನು ಬಾಗಿಲ ಬಳಿ ಇಟ್ಟಿದ್ದಾನೆ. ಬಳಿಕ ಅದಕ್ಕೆ ಹೂವು, ಕುಂಕುಮ ಹಾಕಿ ಪೂಜೆ ಮಾಡಿದ್ದಾನೆ. ತಿಮ್ಮರಾಜುವಿನ ಕೃತ್ಯದಿಂದ ಜನ ಬೆಚ್ಚಿ ಬಿದ್ದಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಹೊಳಲ್ಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ವಿಚಾರಣೆ ಸಂದರ್ಭದಲ್ಲಿ, ದೇವರು ಹೇಳಿದ್ದರಿಂದ ಈ ರೀತಿ ಮಾಡಿದ್ದಾಗಿ ತಿಮ್ಮರಾಜು ತಿಳಿಸಿದ್ದಾನೆ ಎನ್ನಲಾಗಿದೆ.

ತಾಯಿಯನ್ನು ದೇವರು ಎನ್ನುತ್ತಾರೆ. ಆದರೆ, ದೇವರು ಹೇಳಿದೆ ಎಂದು ತಾಯಿಯನ್ನೇ ಮಗ ಕೊಲೆ ಮಾಡಿದ್ದಾನೆ. ಆತನ ಪತ್ನಿ ಮನೆ ಬಿಟ್ಟು ಹೋಗಿದ್ದರಿಂದ ತಾಯಿಯೊಂದಿಗೆ ಜಗಳವಾಡುತ್ತಿದ್ದ ಎಂದು ಗ್ರಾಮಸ್ಥರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...