alex Certify
ಕನ್ನಡ ದುನಿಯಾ       Mobile App
       

Kannada Duniya

3 ತಿಂಗಳ ಮಗುವನ್ನು ಕೊಲೆ ಮಾಡಿ ಬಚ್ಚಿಟ್ಲು ಪಾಪಿ ತಾಯಿ

ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ತಾಯಿಯೊಬ್ಬಳು 3 ತಿಂಗಳ ಹೆಣ್ಣು ಮಗುವನ್ನು ಕೊಲೆ ಮಾಡಿದ್ದಾಳೆ. ಮಗುವನ್ನು ಹತ್ಯೆಮಾಡಿ ಶವವನ್ನು ವಾಶಿಂಗ್ ಮಷಿನ್ ನಲ್ಲಿ ಅಡಗಿಸಿಟ್ಟಿದ್ದಳಂತೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಆರತಿಯನ್ನು ಬಂಧಿಸಿದ್ದಾರೆ.

ಪ್ರಕರಣ ಘಾಜಿಯಾಬಾದ್ ನಲ್ಲಿ ನಡೆದಿದೆ. ಮೂರು ತಿಂಗಳ ಹಿಂದಷ್ಟೇ ಆರತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗು ಹೆಣ್ಣೆಂಬ ನೋವು ಆರತಿಗಿತ್ತಂತೆ. ಆದ್ರೆ ಆರತಿ ಹೊರತುಪಡಿಸಿ ಕುಟುಂಬಸ್ಥರೆಲ್ಲ ಖುಷಿಯಾಗಿದ್ದರಂತೆ. ಮನೆಯಲ್ಲಿ ಮಗು ಜನಿಸುತ್ತಿದ್ದಂತೆ ಪಾರ್ಟಿ ಮಾಡಿದ್ದರಂತೆ. ಆರತಿ ಮಾತ್ರ ಮಗುವಿಗೆ ಎದೆಹಾಲು ನೀಡಲು ನಿರಾಕರಿಸುತ್ತಿದ್ದಳಂತೆ. ಮನೆಯವರ ಮುಂದೆಯೇ ಮಗುವನ್ನು ಕೊಲೆ ಮಾಡುವುದಾಗಿ ಹೇಳಿದ್ದಳಂತೆ.

ಭಾನುವಾರ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮಗುವನ್ನು ಆರತಿ ಕೊಲೆ ಮಾಡಿದ್ದಾಳೆ. ನಂತ್ರ ವಾಷಿಂಗ್ ಮಶಿನ್ ನಲ್ಲಿ ಶವವನ್ನು ಅಡಗಿಸಿಟ್ಟಿದ್ದಾಳೆ. ಮನೆಗೆ ಬಂದ ಅತ್ತೆ ಮಗು ವಿಷ್ಯ ಕೇಳಿದಾಗ ಯಾವುದೇ ಉತ್ತರ ನೀಡಿಲ್ಲ ಎನ್ನಲಾಗಿದೆ. ನಂತ್ರ ಮಗುವಿನ ಹುಡುಕಾಟ ನಡೆದಿದೆ. ಮನೆಗೆ ಬಂದ ಪೊಲೀಸರಿಗೆ ಮಗುವಿನ ಶವ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...