alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿ, ಮಗಳು ಅತ್ಯಾಚಾರಿಗಳಿಂದ ಪಾರಾಗಿದ್ದೀಗೆ….

ಕಾನ್ಪುರ: ಆಘಾತಕಾರಿ ಘಟನೆಯೊಂದರಲ್ಲಿ ತಾಯಿ, ಮಗಳು ಅತ್ಯಾಚಾರಿಗಳಿಂದ ಪಾರಾಗಲು ಚಲಿಸುತ್ತಿದ್ದ ರೈಲಿನಿಂದ ಹಾರಿದ್ದಾರೆ.

ಹೌರಾ –ಜೋಧ್ ಪುರ ಎಕ್ಸ್ ಪ್ರೆಸ್ ನಲ್ಲಿ ಕೋಲ್ಕತ್ತಾದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ತಾಯಿ ಹಾಗೂ ಮಗಳು ರೈಲಿನಿಂದ ಹಾರಿ ಗಾಯಗೊಂಡಿದ್ದು, ಅವರನ್ನು ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಸೇರಿಸಲಾಗಿದೆ.

ಚಾಂದರಿ –ಕಾನ್ಪುರ್ ನಡುವೆ ರೈಲು ಸಂಚರಿಸುವ ಸಂದರ್ಭದಲ್ಲಿ ಕಾಮುಕರು, ತಾಯಿ -ಮಗಳ ಮೇಲೆ ಮುಗಿಬಿದ್ದಿದ್ದು, ಯುವತಿಯನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

ಕಾಮುಕರಿಂದ ಪಾರಾಗಲು ತಾಯಿ, ಮಗಳು ಚಲಿಸುತ್ತಿದ್ದ ರೈಲಿನಿಂದ ಹಾರಿದ್ದು, ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೆಲ ಸಮಯದ ಬಳಿಕ ಅವರು ಸಮೀಪದ ಚಾಂದೇರಿ ನಿಲ್ದಾಣಕ್ಕೆ ತೆರಳಿ ಮಾಹಿತಿ ನೀಡಿದ್ದಾರೆ.

ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ರೈಲಿನಲ್ಲಿ ಕಾಮುಕರು ಕಿರುಕುಳ ನೀಡುತ್ತಿರುವ ಕುರಿತು ಹಿಂದಿನ ನಿಲ್ದಾಣಗಳಲ್ಲಿಯೇ ರೈಲ್ವೇ ಅಧಿಕಾರಿಗೆ ಮಾಹಿತಿ ನೀಡಿದ್ದರೂ, ಅವರು ಸ್ಪಂದಿಸಿಲ್ಲ ಎಂದು ಮಹಿಳೆ ದೂರಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...