alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲು ಕೇಳಿದ ಮಗುವಿಗೆ ಯಮನಾದ ತಾಯಿ

ತಾಯಿಯೊಬ್ಬಳ ರಾಕ್ಷಸ ರೂಪ ಹೊರಬಿದ್ದಿದೆ. ಕ್ಷುಲ್ಲಕ ಕಾರಣಕ್ಕೆ ಹೆತ್ತ ಮಗುವನ್ನೇ ಕೊಲೆ ಮಾಡಿದ್ದಾಳೆ. ಒಂದು ವರ್ಷದ ಮಗು ಹಾಲು ಕೇಳಿದ್ದಕ್ಕೆ ಕೋಪಗೊಂಡ ತಾಯಿ ಮಗುವಿನ ಕತ್ತು ಕೊಯ್ದಿದ್ದಾಳೆ.

ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ತಲ್ವಾಡಿ ಗ್ರಾಮದ ಅನಿತಾ ಎಂಬಾಕೆ ಕೊಲೆಗಡುಕ ತಾಯಿ. ಒಂದು ವರ್ಷದ ಮಗು ಹಾಲು ಕೊಡುವಂತೆ ಹಟ ಮಾಡಿದ್ದಾಳೆ. ಅತ್ತು-ಅತ್ತು ತಾಯಿಗೆ ಕಿರಿಕಿರಿ ಮಾಡಿದ್ದಾಳೆ. ಇದ್ರಿಂದ ಕೋಪಗೊಂಡ ಅನಿತಾ ಕುಡಗೋಲಿನಿಂದ ಮಗುವಿನ ಗಂಟಲು ಸೀಳಿದ್ದಾಳೆ.

ಘಟನೆ ನಂತ್ರ ಮನೆ ಬಾಗಿಲು ಹಾಕಿಕೊಂಡು ಅನಿತಾ ಹೊರಗೆ ಹೋಗಿದ್ದಾಳೆ. ಅನುಮಾನಗೊಂಡ ಪಕ್ಕದ ಮನೆಯವರು ಮನೆ ಬಾಗಿಲು ತೆರೆದಾಗ ಮಗುವಿನ ಶವ ಸಿಕ್ಕಿದೆ. ಅನಿತಾ ಪತಿ ಕೆಲಸದ ಮೇಲೆ ಹೊರಗೆ ಹೋಗಿದ್ದ ಎನ್ನಲಾಗಿದೆ. ನಾಲ್ಕು ವರ್ಷದ ಮಗಳು ಅಜ್ಜನ ಜೊತೆ ತೋಟಕ್ಕೆ ಹೋಗಿದ್ದಳಂತೆ.

ಅನಿತಾಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮುಂದೆ ಮಗುವಿನ ಹೆಣವಿದ್ರೂ ಅನಿತಾ ಕಣ್ಣಲ್ಲಿ ನೀರಿರಲಿಲ್ಲವಂತೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...