alex Certify
ಕನ್ನಡ ದುನಿಯಾ       Mobile App
       

Kannada Duniya

ಮಾತು ಕೇಳದ ಮಗಳನ್ನು ನೇತು ಹಾಕಿದ ತಾಯಿ

ಮಥುರಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಗುವಿಗೆ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗುವಿನ ಕೈ ಮೇಲೆ ಕಟ್ಟಿ ಮನಸ್ಸಿಗೆ ಬಂದಂತೆ ಹೊಡೆಯುತ್ತಿರುವ ಮಹಿಳೆ ಆ ಬಾಲಕಿಯ ತಾಯಿ ಎಂದು ಮೂಲಗಳು ಹೇಳ್ತಿವೆ. ಆದ್ರೆ ಇದ್ರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಘಟನೆ ಮಥುರಾದ ಗೋವರ್ಧನ್ ಠಾಣಾ ವ್ಯಾಪ್ತಿಯ ಮುಕಾರಾದಲ್ಲಿ ನಡೆದಿದೆ. ವಿಡಿಯೋ ನೋಡಿದ ನಂತ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಡೆತ ತಿಂದ ಮಗುವಿಗೆ ಐದು ವರ್ಷ ಎನ್ನಲಾಗಿದೆ. ಮಗು ಮನೆಯಿಂದ ಹೊರಗೆ ಆಡಲು ಹೋಗಿದ್ದಕ್ಕೆ ಕೋಪಗೊಂಡ ತಾಯಿ ಕೈ ಕಟ್ಟಿ ನೇತು ಹಾಕಿ ಹೊಡೆದಿದ್ದಾಳೆ.

ಪ್ರತಿದಿನ ಮಗಳು ತಾಯಿ ಮಾತು ಕೇಳದೆ ಹೊರಗೆ ಆಡಲು ಹೋಗ್ತಿದ್ದಳಂತೆ. ಇದ್ರಿಂದ ಕೋಪಗೊಂಡ ತಾಯಿ, ಮಗಳಿಗೆ ಬುದ್ದಿ ಕಲಿಸಲು ಹೀಗೆ ಮಾಡಿದ್ದಾಳೆ. ಮಗು ಅಳುವ ಶಬ್ದ ಕೇಳಿ ಮನೆಗೆ ಬಂದ ಅಕ್ಕಪಕ್ಕದವರು ಮಗುವನ್ನು ರಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...