alex Certify
ಕನ್ನಡ ದುನಿಯಾ       Mobile App
       

Kannada Duniya

ಟಿವಿ ನಟಿ ಮುಂದೆ ಇಂಥ ಡಿಮ್ಯಾಂಡ್ ಇಟ್ಟಿದ್ದ ಯುವಕ

ಟಿವಿ ನಟಿಯೊಬ್ಬಳು ಜಿಮ್ ಗೆ ತರಬೇತಿಗೆ ಬರ್ತಿದ್ದ ವ್ಯಕ್ತಿ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ್ದಾಳೆ. ಮುಂಬೈನಲ್ಲಿ ಘಟನೆ ನಡೆದಿದೆ. ಅಂಬಾಲ ಪೊಲೀಸರು ವಿಶ್ವಜಿತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರ್ಸಾದ ನಿವಾಸಿ 37 ವರ್ಷದ ನಟಿ, ಫಿಟ್ನೆಸ್ ಕೇಂದ್ರಕ್ಕೆ ವ್ಯಾಯಾಮ ಮಾಡಲು ಹೋಗ್ತಿದ್ದಳು. ಅಲ್ಲಿಗೆ ಆರೋಪಿ ಕೂಡ ಬರ್ತಿದ್ದ ಎನ್ನಲಾಗಿದೆ. ಇಬ್ಬರ ನಡುವೆ ಸಾಮಾನ್ಯ ಮಾತುಕತೆ ನಡೆಯುತ್ತಿತ್ತಂತೆ. ನಂತ್ರ ನಟಿ ಜೊತೆ ಸಂಬಂಧ ಬೆಳೆಸುವ ಇಚ್ಛೆ ವ್ಯಕ್ತಪಡಿಸಿದ್ದಾನೆ ಆರೋಪಿ. ನಿರಾಕರಿಸಿದ್ದಕ್ಕೆ ನಟಿಗೆ ಕಿರುಕುಳ ನೀಡಲು ಮುಂದಾಗಿದ್ದಾನಂತೆ.

ನಟಿ ಸ್ನೇಹಿತೆಯರಿಗೂ ಅಶ್ಲೀಲ ಸಂದೇಶ ಕಳುಹಿಸಿದ್ದಾನಂತೆ ಆರೋಪಿ. ಪೊಲೀಸರು ಜಿಮ್ ಸಿಸಿ ಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿ ವಿರುದ್ಧ ಸಾಕ್ಷಿ ಸಿಕ್ಕ ನಂತ್ರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ವಿಶ್ವಜಿತ್ ಶೆಟ್ಟಿ ಎಲ್ಲರ ಮುಂದೆಯೇ ನಟಿಗೆ ಧಮಕಿ ಹಾಕಿದ್ದ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...