alex Certify
ಕನ್ನಡ ದುನಿಯಾ       Mobile App
       

Kannada Duniya

ವರನ ಮುಂದೆ ಹಣದ ಬೇಡಿಕೆಯಿಟ್ಟ ವಧುವಿನ ಕುಟುಂಬ

ವಿವಾಹ ನಿಶ್ಚಿತಾರ್ಥದ ಬಳಿಕ ವಧುವಿನ ಕುಟುಂಬಸ್ಥರು ಭಾವಿ ವರನ ಮುಂದೆ ಹಣದ ಬೇಡಿಕೆ ಇಟ್ಟ ಕಾರಣ ಬೇಸತ್ತ ಯುವಕ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ.

ಮೋಗಾ ನಿವಾಸಿ 27 ವರ್ಷದ ಜತಿಂದರ್ ಕುಮಾರ್ ಸಾವಿಗೆ ಶರಣಾದವನಾಗಿದ್ದು, ಈತನ ನಿಶ್ಚಿತಾರ್ಥ ಪಾಯಲ್ ಎಂಬಾಕೆಯೊಂದಿಗೆ ನಾಲ್ಕು ತಿಂಗಳ ಹಿಂದೆ ನಡೆದಿತ್ತೆಂದು ಹೇಳಲಾಗಿದೆ. ನಿಶ್ಚಿತಾರ್ಥದ ಬಳಿಕ ಸಂಬಂಧ ಮುಂದುವರೆಸಬೇಕೆಂದರೇ ಪಾಯಲ್ ಹೆಸರಿಗೆ ಒಂದು ಮನೆ ಖರೀದಿಸಬೇಕು ಅಥವಾ 10 ಲಕ್ಷ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಮಾಡುವಂತೆ ಆಕೆಯ ಪೋಷಕರು ಜತಿಂದರ್ ಮುಂದೆ ಬೇಡಿಕೆಯಿಟ್ಟಿದ್ದರೆನ್ನಲಾಗಿದೆ.

ಇದರಿಂದ ನೊಂದ ಜತಿಂದರ್ ಕುಮಾರ್ ಶುಕ್ರವಾರದಂದು ಲೈಸೆನ್ಸ್ ಹೊಂದಿದ್ದ ತನ್ನ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಜತಿಂದರ್ ಪೋಷಕರು ಪಾಯಲ್ ಕುಟುಂಬಸ್ಥರ ವಿರುದ್ದ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಪಾಯಲ್ ಮತ್ತಾಕೆಯ ಕುಟುಂಬಸ್ಥರ ಹುಡುಕಾಟದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...