alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತಹ ಕೆಲಸ ಮಾಡಿದ್ದ ಮಾಡೆಲ್ ಆತ್ಮಹತ್ಯೆಗೆ ಯತ್ನ

ಚಿತ್ತೂರು: ಮಾಡೆಲ್ ಸಂಗೀತಾ ಚಟರ್ಜಿ ಟಾಯ್ಲೆಟ್ ಕ್ಲೀನರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜೈಲ್ ನಲ್ಲಿ ನಡೆದಿದೆ.

ರಕ್ತ ಚಂದನ ಸ್ಮಗ್ಲಿಂಗ್ ದಂಧೆಯಲ್ಲಿ ಭಾಗಿಯಾದ ಆರೋಪದ ಮೇಲೆ ಪಶ್ಚಿಮ ಬಂಗಾಳದಲ್ಲಿ ಸಂಗೀತಾ ಚಟರ್ಜಿಯನ್ನು ಕೆಲ ತಿಂಗಳ ಹಿಂದೆ ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದರು.

ಕುಖ್ಯಾತ ರಕ್ತಚಂದನ ಸ್ಮಗ್ಲರ್ ಮಾರ್ಕೊಂಡಾ ಲಕ್ಷ್ಮಣ್ ಪತ್ನಿಯಾಗಿರುವ ಸಂಗೀತಾ ಮಲೇಷಿಯಾ, ದುಬೈ, ಚೀನಾಗೆ ರಕ್ತ ಚಂದನ ಕಳ್ಳ ಸಾಗಾಣೆ ಮಾಡಿದ್ದ ಆರೋಪ ಹೊತ್ತಿದ್ದಾರೆ.

ತನ್ನ 20 ನೇ ವಯಸ್ಸಿಗೆ ಮಾಡೆಲ್ ಕ್ಷೇತ್ರಕ್ಕೆ ಎಂಟ್ರಿ ಪಡೆದಿದ್ದ ಸಂಗೀತಾ ಜೀವನ ಲಕ್ಷ್ಮಣ್ ಸಂಪರ್ಕಕ್ಕೆ ಬಂದ ನಂತರ ಬದಲಾಯಿತು.

ಪತಿ ಬಂಧನದ ಬಳಿಕ ಆಕೆಯೇ ರಕ್ತ ಚಂದನದ ದಂಧೆಯನ್ನು ನೋಡಿಕೊಳ್ಳುತ್ತಿದ್ದಳು. ಚಿತ್ತೂರು ಪೊಲೀಸರು ಕಳೆದ ಮಾರ್ಚ್ ನಲ್ಲಿ ಕೋಲ್ಕತ್ತದಲ್ಲಿ ಆಕೆಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು.

ಕಳೆದ 5 ತಿಂಗಳಿಂದ ಆಕೆಗೆ ಜಾಮೀನು ಸಿಗದ ಕಾರಣ, ಜೈಲಿನಲ್ಲಿ ಟಾಯ್ಲೆಟ್ ಕ್ಲೀನರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಇನ್ನೂ ಅಪಾಯದಿಂದ ಹೊರ ಬಂದಿಲ್ಲವೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...