alex Certify
ಕನ್ನಡ ದುನಿಯಾ       Mobile App
       

Kannada Duniya

ಲೋಕಲ್ ಟ್ರೈನ್ ನಲ್ಲಿ ಬೆತ್ತಲುಗೊಳಿಸಿ ಥಳಿತ

default

ಕಳ್ಳತನ ಪ್ರಕರಣಗಳು ದಿನೇ ದಿನೇ ಜಾಸ್ತಿಯಾಗ್ತಿವೆ. ರೈಲಿನಲ್ಲಿ ವಸ್ತುಗಳನ್ನು ರಕ್ಷಿಸಿಕೊಳ್ಳುವುದೇ ತಲೆನೋವಿನ ವಿಚಾರ ಎನ್ನುವಂತಾಗಿದೆ. ಲೋಕಲ್ ಟ್ರೈನ್ ನಲ್ಲಿ ಸಂಚರಿಸುವಾಗ ಮೈಯೆಲ್ಲ ಕಣ್ಣಾಗಿದ್ದರೂ ಸಾಲೋದಿಲ್ಲ.

ಮುಂಬೈ ಲೋಕಲ್ ಟ್ರೈನ್ ನಲ್ಲಿ ಕಳ್ಳತನ ಮಾಡ್ತಿದ್ದ ಇಬ್ಬರು ಯುವಕರು ಬುದ್ಧಿ ಕಲಿತಂತಿದೆ. ಯಾಕೆಂದ್ರೆ ಜೀವನದಲ್ಲಿ ಮರೆಯಲಾಗದ ಒದೆ ತಿಂದಿದ್ದಾರೆ ಅವರು. ಮೊಬೈಲ್ ಕಳ್ಳತನ ಮಾಡಿ ಸಿಕ್ಕಿಬಿದ್ದ ಇಬ್ಬರು ಯುವಕರ ಬಟ್ಟೆ ಬಿಚ್ಚಿ ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ ಕೆಲ ಪ್ರಯಾಣಿಕರು.

ಕಳ್ಳರಿಗೆ ಕೆಲವರು ಗೂಸಾ ನೀಡ್ತಿದ್ದರೆ ಮತ್ತೆ ಕೆಲವರು ಇದನ್ನು ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾದ ವಿಡಿಯೋ ಆಧಾರದ ಮೇಲೆ ರೈಲ್ವೆ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...