alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿಯರು ಮೊಬೈಲ್ ಮುಟ್ಟಿದ್ರೆ…

khap-1

ಉತ್ತರ ಪ್ರದೇಶದ ಪಂಚಾಯತಿಯೊಂದು ಮೊಬೈಲ್ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ಹೊರಡಿಸಿದೆ. ಆ ಪಂಚಾಯತಿ ಅಡಿಯಲ್ಲಿ ಬರುವ 18 ವರ್ಷದೊಳಗಿನ ಹುಡುಗಿಯರು ಮೊಬೈಲ್ ಬಳಸುವಂತಿಲ್ಲ. ಮೊಬೈಲ್ ತೆಗೆದು ಕೊಟ್ಟ ಕುಟುಂಬ ಹಾಗೂ ಬಳಸಿದ ಹುಡುಗಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಯಾವ ಪ್ರಮಾಣದಲ್ಲಿ, ಏನು ಶಿಕ್ಷೆ ನೀಡಲಾಗುತ್ತದೆ ಎನ್ನುವ ಬಗ್ಗೆ ಪಂಚಾಯತಿ ಏನೂ ಹೇಳಿಲ್ಲ. ಉತ್ತರ ಪ್ರದೇಶದ ರಜಪೂತ್ ಸಮುದಾಯದ ಪಂಚಾಯತಿ ಮುಖಂಡರು ಈ ಆದೇಶ ಹೊರಡಿಸಿದ್ದಾರೆ. ಈ ಪಂಚಾಯತಿ ಅಡಿಯಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ಬರ್ತಾರೆ.

ಕೆಲ ದಿನಗಳ ಹಿಂದೆ ಲೋದ್ ಸಮುದಾಯದ ಹುಡುಗಿಯೊಬ್ಬಳ ಕೆಟ್ಟ ಫೋಟೋ ಸಾರ್ವಜನಿಕ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಆಗಿತ್ತು. ಈ ಸಂಬಂಧ ಪಂಚಾಯತಿ ಕರೆಯಲಾಗಿತ್ತು. ಈ ವೇಳೆ ಪಂಚರು ಹುಡುಗಿಯರಿಗೆ ಮೊಬೈಲ್ ನಿಷೇಧ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಮೊಬೈಲ್ ಬಳಸುವುದರಿಂದ ಹುಡುಗಿಯರು ಕೆಟ್ಟ ಜನರ ಸಂಪರ್ಕ ಬೆಳೆಸ್ತಾರೆ. ನಂತ್ರ ಅವರ ಜಾಲದಲ್ಲಿ ಸಿಕ್ಕಿ ಬೀಳ್ತಾರೆ. ಹಾಗಾಗಿ ಮೊಬೈಲ್ ಬಳಕೆಯನ್ನು ನಿಷೇಧಿಸಬೇಕೆಂಬ ನಿರ್ಧಾರ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...