alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ಕಿರುಕುಳ ನೀಡಿದ ತಂದೆಗೆ ಚಾಕುವಿನಿಂದ ಇರಿದ ಪುತ್ರಿ

ಮುಂಬೈನ ಥಾಣೆಯಲ್ಲಿ 17 ವರ್ಷದ ಹುಡುಗಿಯೊಬ್ಬಳು ಲೈಂಗಿಕ ಕಿರುಕುಳ ನೀಡಿದ ತಂದೆಗೆ ಚಾಕುವಿನಿಂದ ಇರಿದಿದ್ದಾಳೆ. ಬಳಿಕ ನೆರೆಹೊರೆಯವರ ಸಹಾಯದಿಂದ ತಂದೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾಳೆ. ಸದ್ಯ ಆತ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡು ಆರೋಪಿ ಚೇತರಿಸಿಕೊಳ್ಳುತ್ತಿದ್ದಂತೆ ಆತನನ್ನು ಬಂಧಿಸಲಿದ್ದಾರೆ. 12ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಗೆ ಕೂಡ ಸಣ್ಣಪುಟ್ಟ ಗಾಯವಾಗಿದೆ. ಮಂಗಳವಾರ ಸಂಜೆ ಆಕೆ ಮನೆಯಲ್ಲಿ ಒಬ್ಬಳೇ ಇದ್ಲು. ಮನೆಗೆ ಬಂದ ತಂದೆ ಸೆಕ್ಸ್ ಬಗ್ಗೆ ಮಾತನಾಡಲು ಆರಂಭಿಸಿದ್ದ.

ಕುಡಿದ ಅಮಲಲ್ಲಿ ತನ್ನ ಮಗಳನ್ನೇ ಅಸಭ್ಯವಾಗಿ ಸ್ಪರ್ಷಿಸಿದ್ದಾನೆ. ನಂತರ ಅವಳ ಬಟ್ಟೆಯನ್ನು ಬಿಚ್ಚಿಹಾಕಲು ಯತ್ನಿಸಿದ್ದಾನೆ. ಕೂಡಲೇ ಆತನನ್ನು ತಳ್ಳಿದ ಬಾಲಕಿ, ಅಡುಗೆ ಮನೆಗೆ ಓಡಿ ಹೋಗಿ ಚಾಕು ತಂದಿದ್ದಾಳೆ. ಹತ್ತಿರ ಬರದಂತೆ ಆತನನ್ನು ಹೆದರಿಸಿದ್ದಾಳೆ.

ಆದ್ರೆ ಆತ ಬಗ್ಗದೇ ಇದ್ದಾಗ ಅನಿವಾರ್ಯವಾಗಿ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾಳೆ. ನಂತರ ಅಕ್ಕಪಕ್ಕದವರನ್ನು ಸಹಾಯಕ್ಕೆ ಕರೆದಿದ್ದಾಳೆ. ವೆಲ್ಡಿಂಗ್ ಕೆಲಸ ಮಾಡ್ತಾ ಇದ್ದ ಆತ ಮದ್ಯ ವ್ಯಸನಿಯಾಗಿದ್ದ. ಪತ್ನಿಗೆ ನಿತ್ಯ ಹೊಡೆದು ಹಿಂಸಿಸುತ್ತಿದ್ದ. ಇದರಿಂದ ಬೇಸತ್ತು ಮೊದಲ ಪತ್ನಿ ಬಿಟ್ಟು ಹೋಗಿದ್ದಳು. ಮಗಳನ್ನು ಜೊತೆಗೆ ಕರೆದೊಯ್ದಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...