alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿಗೆ ಜನ್ಮ ನೀಡಿದ 12 ವರ್ಷದ ಬಾಲಕಿ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ 12 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಅತ್ಯಾಚಾರ ಪೀಡಿತೆ ಬಾಲಕಿ ಶನಿವಾರ ಮಗುವಿಗೆ ಜನ್ಮ ನೀಡಿದ್ದಾಳೆ.

ಮಾಹಿತಿ ಪ್ರಕಾರ ಅತ್ಯಾಚಾರಕ್ಕೊಳಗಾದ ಬಾಲಕಿ ಕುಟುಂಬಸ್ಥರು ದೂರು ನೀಡಿದ್ರೂ ಪೊಲೀಸರು ಆರೋಪಿಗಳ ವಿರುದ್ಧ ಅನೇಕ ತಿಂಗಳುಗಳ ಕಾಲ ಪೋಸ್ಕೋ ಕಾಯಿದೆ ಅಡಿ ಯಾವುದೇ ದೂರು ದಾಖಲಿಸಿಕೊಂಡಿರಲಿಲ್ಲ. ಶನಿವಾರ 4.30 ರ ಸುಮಾರಿಗೆ ಅತ್ಯಾಚಾರ ಪೀಡಿತ ಬಾಲಕಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂಬ ಮಾಹಿತಿ ಆಶಾ ಜ್ಯೋತಿ ಸೆಂಟರ್ ನಿಂದ ಬಂದಿದೆ. ಆರಂಭದಲ್ಲಿ ಪೀಡಿತೆ ಪಾಲಕರು ಬಾಲಕಿ ಮಗುವಿಗೆ ಜನ್ಮ ನೀಡುವುದನ್ನು ವಿರೋಧಿಸಿದ್ದರು.

ಕುಟುಂಬಸ್ಥರಿಗೆ ಮನವೊಲಿಸಿ ಬಾಲಕಿಗೆ ಹೆರಿಗೆ ಮಾಡಿಸಲಾಗಿದೆ. ಕೇಂದ್ರ ಮಂತ್ರಿ ರೀಟಾ ಬಹುಗುಣ್ ಪಿಎ ಶಬ್ನಮ್ ಪಾಂಡೆ ಉಪಸ್ಥಿತಿಯಲ್ಲಿ ಬಾಲಕಿಗೆ ಹೆರಿಗೆ ಮಾಡಿಸಲಾಗಿದೆ. ಲಕ್ನೋ ಬಳಿಯ ಹಳ್ಳಿಯೊಂದರ ಈ ಬಾಲಕಿ ಪಕ್ಕದ ಮನೆ ಯುವಕನಿಂದ ಅತ್ಯಾಚಾರಕ್ಕೊಳಗಾಗಿದ್ದಳು. ಸದ್ಯ ಆರೋಪಿ ಜೈಲಿನಲ್ಲಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...