alex Certify
ಕನ್ನಡ ದುನಿಯಾ       Mobile App
       

Kannada Duniya

ಆ್ಯಕ್ಟಿಂಗ್ ಆಸೆ ತೋರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ

ಉತ್ತರ ಪ್ರದೇಶ ಸಂಬಾಲ್ ಜಿಲ್ಲೆಯ ಭಹಜೋಯಿಯಲ್ಲಿ ಧಾರಾವಾಹಿಯಲ್ಲಿ ನಟಿಸಲು ಅವಕಾಶಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಪ್ರಾಪ್ತೆ ದೂರಿನ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಭಹಜೋಯಿ ನಿವಾಸಿ 15 ವರ್ಷದ ಬಾಲಕಿಯನ್ನು ಆಕೆಗೆ ಡಾನ್ಸ್ ಕಲಿಸುತ್ತಿದ್ದ ಆಜಾದ್ ಹುಸೇನ್ ಎಂಬಾತ ಅತ್ಯಾಚಾರವೆಸಗಿದ್ದಾನೆ. ಧಾರಾವಾಹಿಯಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಂಬಿಸಿ ದೆಹಲಿಗೆ ಕರೆದೊಯ್ದಿದ್ದಾನೆ. ಡಿಸೆಂಬರ್ 23ರಂದು ಅತ್ಯಾಚಾರವೆಸಗಿದ್ದಾನೆಂದು ಅಪ್ರಾಪ್ತೆ ಆರೋಪ ಮಾಡಿದ್ದಾಳೆ.

ಆರೋಪಿ ಈ ಹಿಂದೆ ಕೂಡ ಬಾಲಕಿಯನ್ನು ಡೆಹ್ರಾಡೂನ್ ಗೆ ಕರೆದೊಯ್ದಿದ್ದ. ಅಲ್ಲಿ ಬಾಲಕಿ ಡಾನ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ತಂದಿದ್ದಳು. ಇದೇ ಕಾರಣಕ್ಕೆ ಹುಸೇನ್ ನನ್ನು ಬಾಲಕಿ ಕುಟುಂಬಸ್ಥರು ಸಂಪೂರ್ಣವಾಗಿ ನಂಬಿದ್ದರು. ಆದ್ರೆ ಮುಂಬೈಗೆ ಹೋಗುವ ಬದಲು ಬಾಲಕಿಯನ್ನು ದೆಹಲಿಗೆ ಕರೆದೊಯ್ದ ಹುಸೇನ್ ಅತ್ಯಾಚಾರವೆಸಗಿದ್ದಾನೆ. ಹಿಂದೂ ಪರ ಸಂಘಟನೆಗಳು ಇದನ್ನು ಲವ್ ಜಿಹಾದ್ ಎನ್ನುತ್ತಿದ್ದು ಸೂಕ್ತ ತನಿಖೆಗೆ ಆದೇಶ ನೀಡಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...