alex Certify
ಕನ್ನಡ ದುನಿಯಾ       Mobile App
       

Kannada Duniya

ಹೀಗೆ ಬಯಲಾಯ್ತು ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ

ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಮನೆಯ ಹೊರಗೊಂದೇ ಅಲ್ಲ ಮನೆಯಲ್ಲಿ ಕೂಡ ಮಹಿಳೆಯರು ಸುರಕ್ಷಿತರಲ್ಲ. ಇಂದೋರ್ ನಲ್ಲಿ ನಡೆದ ಘಟನೆ ಪವಿತ್ರ ಸಂಬಂಧಕ್ಕೆ ಕಳಂಕ ತಂದಿದೆ.

ಮಾಧ್ಯಮಗಳ ವರದಿ ಪ್ರಕಾರ 15 ವರ್ಷದ ಅಪ್ರಾಪ್ತೆ ಮೇಲೆ ಆಕೆ ಸಹೋದರ ಸಂಬಂಧಿಯೇ ಅತ್ಯಾಚಾರವೆಸಗಿದ್ದಾನೆ. ದೇವಾಸ್ ಜಿಲ್ಲೆಯ ಉದಯ್ಪುರದ ಪೀಡಿತೆ ಇಂದೋರ್ ನ ಸ್ಕೂಲ್ ಒಂದರ ಮುಂದೆ ನಿಂತಿದ್ದಳು. ಅನುಮಾನಗೊಂಡ ಸ್ಥಳೀಯರು ಸಹಾಯ ವಾಣಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

ತುಂಬಾ ಭಯಗೊಂಡಿದ್ದ ಹುಡುಗಿ 15 ಗಂಟೆಗಳ ಕೌನ್ಸಿಲಿಂಗ್ ನಂತ್ರ ಸತ್ಯ ಹೊರ ಹಾಕಿದ್ದಾಳೆ. ಸಹೋದರ ಎರಡು ಬಾರಿ ಅತ್ಯಾಚಾರವೆಸಗಿದ್ದ. ಮನೆಯವರಿಗೆ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಸಿದ್ದ. ಕೆಲ ತಿಂಗಳ ಹಿಂದೆ ಗರ್ಭಿಣಿ ಎಂಬ ಸಂಗತಿ ತಿಳಿದಿದೆ. ಅಪ್ಪ-ಅಮ್ಮನನ್ನು ಎದುರಿಸಲು ಭಯವಾಯ್ತು. ಸಹೋದರಿ ಮನೆಗೆ ಬಂದ ಅಮ್ಮನ ಜೊತೆ ಬಂದವಳು ಇಲ್ಲಿಗೆ ಬಂದೆ ಎಂದಿದ್ದಾಳೆ.

ವೈದ್ಯಕೀಯ ಪರೀಕ್ಷೆ ವೇಳೆ ಪೀಡಿತೆ 5 ತಿಂಗಳ ಗರ್ಭಿಣಿ ಎಂಬುದು ಗೊತ್ತಾಗಿದೆ. ಕುಟುಂಬಸ್ಥರನ್ನು ಪೊಲೀಸರು ಸಂಪರ್ಕಿಸಿದ್ದು, ಹುಡುಗಿಯನ್ನು ಕುಟುಂಬಕ್ಕೆ ಹಸ್ತಾಂತರಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...