alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದ ಮತ್ತಿನಲ್ಲಿ ಇಂಥ ಕೆಲಸ ಮಾಡಿದ ಪಾಪಿ

ಕುಡಿದ ವ್ಯಕ್ತಿ ಇಂಥ ಕೆಲಸಕ್ಕಿಳಿತಾನೆಂದು ಯಾರೂ ಊಹಿಸಿರಲಿಲ್ಲ. ನಡೆದ ಘಟನೆ ಕೇಳಿ ಪೊಲೀಸ್ ಕೂಡ ದಂಗಾಗಿದ್ದಾರೆ. ಘಟನೆ ನಡೆದಿರುವುದು ಮಹಾರಾಷ್ಟ್ರದ ಪುಣೆಯಲ್ಲಿ.

ಇಲ್ಲಿನ ಯುವಕನೊಬ್ಬ ಕುಡಿದ ಮತ್ತಿನಲ್ಲಿ ಎರಡುವರೆ ವರ್ಷದ ಬಾಲಕಿಯನ್ನು ಅಪಹರಿಸಿದ್ದಾನೆ. ಬಾಲಕಿ ಮೇಲೆ ಅತ್ಯಾಚಾರವೆಸಗಿ ಆಕೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಅಜಯ್ ಪೇಂಟರ್. ರಾತ್ರಿ ಸ್ನೇಹಿತರ ಜೊತೆ ಮದ್ಯ ಸೇವನೆ ಮಾಡಿದ ಅಜಯ್ ಮಗುವಿನ ಮನೆಗೆ ನುಗ್ಗಿದ್ದಾನೆ.

ಮನೆಯಲ್ಲಿ ಮಲಗಿದ್ದ ಎರಡುವರೆ ವರ್ಷದ ಮಗುವನ್ನು ಅಪಹರಿಸಿದ್ದಾನೆ. ಈ ವೇಳೆ ಮನೆಯವರೆಲ್ಲ ಗಾಢ ನಿದ್ರೆಯಲ್ಲಿದ್ದರು ಎನ್ನಲಾಗಿದೆ. ನಿದ್ರೆಯಿಂದ ಎಚ್ಚರವಾದ ತಾಯಿಗೆ ಮಗು ಮನೆಯಲ್ಲಿರದ ವಿಷ್ಯ ಗೊತ್ತಾಗಿದೆ. ಎಲ್ಲರೂ ರಾತ್ರಿ ಮಗುವನ್ನು ಹುಡುಕಿದ್ದಾರೆ. ಬೆಳಿಗ್ಗೆ ಮಗುವಿನ ಶವ ಗ್ರಾಮದಲ್ಲಿ ಸಿಕ್ಕಿದೆ. ವಿಚಾರಣೆ ವೇಳೆ ಊರಿಗೆ ಬಂದಿದ್ದ ಅಜಯ್ ಅಂದು ರಾತ್ರಿಯಿಂದ ನಾಪತ್ತೆಯಾಗಿದ್ದಾನೆಂಬ ವಿಷ್ಯ ಗೊತ್ತಾಗಿದೆ. ಸ್ಥಳೀಯ ಪೊಲೀಸರು ಪುಣೆ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...