alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದರು ಪ್ರಿನ್ಸಿಪಾಲ್ ಸೇರಿ 18 ಮಂದಿ

ಬಿಹಾರದ ಛಪ್ರಾ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಶಾಲೆ ಪ್ರಿನ್ಸಿಪಾಲ್, 2 ಶಿಕ್ಷಕ ಹಾಗೂ 15 ವಿದ್ಯಾರ್ಥಿಗಳ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. 13 ವರ್ಷದ ವಿದ್ಯಾರ್ಥಿನಿ ಕಳೆದ 6 ತಿಂಗಳಿಂದ ನನ್ನ ಮೇಲೆ ಅತ್ಯಾಚಾರ ನಡೆಯುತ್ತಿದೆ. ಬ್ಲಾಕ್ಮೇಲ್ ಮಾಡ್ತಿದ್ದಾರೆಂದು ವಿದ್ಯಾರ್ಥಿನಿ ದೂರಿದ್ದಾಳೆ.

ದಿಪೇಶ್ವರ್ ಬಾಲ್ ಜ್ಞಾನ ನಿಕೇತನ ಶಾಲೆ ಪ್ರಿನ್ಸಿಪಾಲ್ ಹಾಗೂ ಇಬ್ಬರು ಶಿಕ್ಷಕರು ಹಾಗೂ 15 ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ. ವಿಷ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಎಸ್ಪಿಗೆ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 2017 ರಲ್ಲಿ ವಿದ್ಯಾರ್ಥಿಯೊಬ್ಬ ಪೀಡಿತೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದ್ರ ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡಿದ್ದಾನೆ. ನಂತ್ರ ಬೇರೆ ವಿದ್ಯಾರ್ಥಿಗಳು ಪೀಡಿತೆ ಮೇಲೆ ಅತ್ಯಾಚಾರವೆಸಗಿದ್ದಾರೆ.

ಈ ಬಗ್ಗೆ ವಿದ್ಯಾರ್ಥಿನಿ ಪ್ರಿನ್ಸಿಪಾಲರಿಗೆ ದೂರು ನೀಡಿದ್ದಾಳೆ. ಪ್ರಿನ್ಸಿಪಾಲರು ಕೂಡ ಇಬ್ಬರು ಶಿಕ್ಷಕರ ಜೊತೆ ಸೇರಿ ಅತ್ಯಾಚಾರವೆಸಗಿದ್ದಾರಂತೆ. ಶುಕ್ರವಾರ ವಿದ್ಯಾರ್ಥಿನಿಗೆ ವೈದ್ಯಕೀಯ ಪರೀಕ್ಷೆ ನಡೆದಿದೆ. ವರದಿ ನಂತ್ರ ಮುಂದಿನ ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...