alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭ ಧರಿಸಿದ್ಲು 12 ವರ್ಷದ ಅಪ್ರಾಪ್ತೆ

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಸಂಬಂಧಕ್ಕೆ ಕಳಂಕ ತರುವಂತಹ ಘಟನೆ ನಡೆದಿದೆ. ಸಂಬಂಧದಲ್ಲಿ ಚಿಕ್ಕಪ್ಪನಾಗುವ ವ್ಯಕ್ತಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಾಲಕಿಗೆ 3 ತಿಂಗಳಾದ್ಮೇಲೆ ಕುಟುಂಬಸ್ಥರಿಗೆ ವಿಷ್ಯ ಗೊತ್ತಾಗಿದೆ. ಆರೋಪಿ ಕುಟುಂಬಸ್ಥರು ಪೀಡಿತೆ ಕುಟುಂಬಸ್ಥರ ವಿರುದ್ಧವೇ ತಿರುಗಿ ಬಿದ್ದಿದ್ದು, ಹತ್ಯೆಗೈಯ್ಯುವ ಬೆದರಿಕೆ ನೀಡಿದ್ದಾರೆ.

ಆರೋಪಿ 27 ವರ್ಷದ ರಿತೇಶ್ ಪೀಡಿತೆಯನ್ನು ಆಗಾಗ ಮನೆಗೆ ಕರೆದು ಅತ್ಯಾಚಾರವೆಸಗುತ್ತಿದ್ದನಂತೆ. ಈ ಬಗ್ಗೆ ಬಾಯಿಬಿಟ್ರೆ ಕೊಲೆ ಮಾಡುವುದಾಗಿ ಬೆದರಿಸಿದ್ದನಂತೆ. ಸದಾ ಸುಮ್ಮನಿರ್ತಿದ್ದ ಬಾಲಕಿ ಮೇಲೆ ಕುಟುಂಬಸ್ಥರಿಗೆ ಅನುಮಾನ ಬಂದಿದೆ. ಹೊಟ್ಟೆ ದೊಡ್ಡದಾಗ್ತಿದ್ದಂತೆ ಅನುಮಾನ ಜಾಸ್ತಿಯಾಗಿದೆ. ಸರಿಯಾಗಿ ವಿಚಾರಣೆ ಮಾಡಿದಾಗ ಬಾಲಕಿ ಬಾಯ್ಬಿಟ್ಟಿದ್ದಾಳೆ.

ಈ ವಿಷ್ಯವನ್ನು ರಿತೇಶ್ ಕುಟುಂಬಸ್ಥರಿಗೆ ತಿಳಿಸಿದ್ರೆ ಅವ್ರು ಕೊಲೆ ಮಾಡುವ ಬೆದರಿಕೆ ಹಾಕಿದ್ದರಂತೆ. ಭಯದ ಮಧ್ಯೆ ಪೀಡಿತೆ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ನ್ಯಾಯ ಕೊಡಿಸುವಂತೆ ಕೋರ್ಟ್ ಮೊರೆ ಹೋಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...