alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತೆ ಮೇಲೆ ಅಪ್ರಾಪ್ತ ಬಾಲಕರಿಂದ ಅತ್ಯಾಚಾರ: ವಿಷ್ಯ ಕೇಳಿ ದಂಗಾದ ಮನೋವಿಜ್ಞಾನಿಗಳು

ಕಾನ್ಪುರದಲ್ಲಿ ನಾಲ್ವರು ಅಪ್ರಾಪ್ತ ಮಕ್ಕಳು ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಆರರಿಂದ 10 ವರ್ಷದ ನಾಲ್ವರು ಮಕ್ಕಳು ಈ ಕೃತ್ಯವೆಸಗಿದ್ದಾರೆ.ಗ್ರಾಮಸ್ಥರ ಮುಂದೆ ಆರೋಪಿ ಮಕ್ಕಳು ತಪ್ಪೊಪ್ಪಿಕೊಂಡಿದ್ದಾರೆ. ನಂತ್ರ ಪೊಲೀಸ್ ಠಾಣೆಯಲ್ಲಿ POCSO ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಈ ಘಟನೆ ಕೇಳಿ  ಪೊಲೀಸ್ ಅಧಿಕಾರಿಗಳು ಹಾಗೂ ಮನೋವಿಜ್ಞಾನಿಗಳು ದಂಗಾಗಿದ್ದಾರೆ. ಕಾನ್ಪುರದ ಮಹಾರಾಜಪುರದಲ್ಲಿ ಘಟನೆ ನಡೆದಿದೆ. ನಾಲ್ಕು ವರ್ಷದ ಬಾಲಕಿ ಮನೆ ಮುಂದೆ ಆಟವಾಡ್ತಿದ್ದಳು. ಆಕೆ ಜೊತೆ ಆಟವಾಡುವ ನಾಟಕವಾಡಿ ಆರೋಪಿ ಬಾಲಕರು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಟದ ಹೆಸರಿನಲ್ಲಿಯೇ ದುಷ್ಕೃತ್ಯವೆಸಗಿದ್ದಾರೆ.

ಆರೋಪಿ ಬಾಲಕನೊಬ್ಬನಿಗೆ ಮೊಬೈಲ್ ಸಿಕ್ಕಿತ್ತು ಎನ್ನಲಾಗಿದೆ. ಅದ್ರಲ್ಲಿ ಪೋರ್ನ್ ವಿಡಿಯೋ ಇತ್ತು. ಅದನ್ನು ಬಾಲಕರು ನಕಲು ಮಾಡಿದ್ದಾರೆ. ಬಾಲಕಿ ಮನೆಗೆ ಬರ್ತಿದ್ದಂತೆ ರಕ್ತ ಕಾಣಿಸಿದೆ. ಆಟವಾಡ್ತಾ ಮಗು ಬಿದ್ದಿರಬಹುದೆಂದು ಮನೆಯವರು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಮನೆಗೆ ಬಂದ ನಂತ್ರ ಮಗು ಎಲ್ಲವನ್ನೂ ಹೇಳಿದೆ. ಈ ಬಗ್ಗೆ ಗ್ರಾಮಸ್ಥರಿಗೆ ಬಾಲಕಿ ತಂದೆ ವಿಷ್ಯ ತಿಳಿಸಿದ್ದಾನೆ. ನಂತ್ರ ಪಂಚಾಯತಿ ಮುಂದೆ ಬಾಲಕರು ಸತ್ಯ ಒಪ್ಪಿಕೊಂಡಿದ್ದಾರೆ. ಆರೋಪಿ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...