alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಗೆ ಬೆಂಕಿ ಇಟ್ಟು ತಂದೆ-ತಾಯಿ ಸಾವಿಗೆ ಕಾರಣನಾದ ಪುತ್ರ

ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿ ತನ್ನ ಮನೆಗೆ ಬೆಂಕಿ ಹಚ್ಚಿದ ಘಟನೆ ದೆಹಲಿಯ ಮೋತಿ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ವೃದ್ದ ದಂಪತಿ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ.

70 ವರ್ಷದ ಚಿದಿಲಾಲ್, 62 ವರ್ಷದ ಲಕ್ಷ್ಮಿ ಮೃತ ದಂಪತಿ. ಇವರನ್ನು ರಕ್ಷಿಸಲು ಹೋಗಿದ್ದ ಪಕ್ಕದ ಮನೆಯ ವ್ಯಕ್ತಿ ನವೀನ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಾನಸಿಕವಾಗಿ ಅಸ್ವಸ್ಥನಾಗಿದ್ದ ಮಗನೆ ಮನೆಗೆ ಬೆಂಕಿ ಹಚ್ಚಿ ತನ್ನ ಹೆತ್ತವರ ಸಾವಿಗೆ ಕಾರಣನಾಗಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗಿನ ಜಾವ 3.25 ಕ್ಕೆ ಈ ಘಟನೆ ನಡೆದಿದ್ದು, ಸುಟ್ಟ ಗಾಯಗಳಿಂದ ನರಳುತ್ತಿದ್ದ ದಂಪತಿಯನ್ನು ಆಸ್ಪತ್ರೆಗೆ ಸೇರಿಸಲಾಯ್ತು. ಆದ್ರೆ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಪ್ರತಿದಿನ ಈ ವ್ಯಕ್ತಿ ತನ್ನ ತಂದೆ-ತಾಯಿಗೆ ಹಿಂಸಿಸುತ್ತಿದ್ದನಂತೆ. ಅಲ್ಲದೆ ತಾಯಿಯ ಬಳಿ ದುಡ್ಡಿಗಾಗಿ ಪೀಡಿಸುತ್ತಿದ್ದ, ಹಣ ಕೊಡದಿದ್ರೆ ಗಲಾಟೆ ಮಾಡ್ತಿದ್ದಾ ಅಂತಾ ಸ್ಥಳೀಯರು ತಿಳಿಸಿದ್ದಾರೆ.

ಚಾಟ್ಸ್ ಅಂಗಡಿ ಇಟ್ಟುಕೊಂಡಿದ್ದ ಈ ದಂಪತಿ 2 ಬಿ ಹೆಚ್ ಕೆ ಮನೆಯಲ್ಲಿ ಮಾನಸಿಕ ಅಸ್ವಸ್ಥ ಮಗನೊಂದಿಗೆ ವಾಸಿಸುತ್ತಿದ್ರು. ಈ ಘಟನೆಯಲ್ಲಿ ತಮ್ಮ ಸಹೋದರನ ಕೈವಾಡವಿದೆ ಅಂತಾ ಮೃತ ದಂಪತಿಯ ಇನ್ನುಳಿದ ಮಕ್ಕಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...