alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಮುಂದೆಯೇ ಪರ ಪುರುಷನೊಂದಿಗೆ ಸಂಬಂಧ ಬೆಳೆಸಿದ ತಾಯಿ..ನಂತ್ರ..

maa

ತಾಯಿ ಮಕ್ಕಳ ಸಂಬಂಧ ಪವಿತ್ರವಾದದ್ದು. ಆದ್ರೆ ಈ ಸಂಬಂಧಕ್ಕೆ ಕಳಂಕ ತರುವ ಕೆಲಸ ಮಾಡಿದ್ದಾಳೆ ಇಲ್ಲೊಬ್ಬ ಮಹಿಳೆ. ತಾಯಿ, ತಂದೆ ಹಾಗೂ ಇನ್ನೊಬ್ಬ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಫರೀದಾಬಾದ್ ನಲ್ಲಿ ನಾಲ್ಕನೆ ಕ್ಲಾಸ್ ಓದುತ್ತಿರುವ ಬಾಲಕಿ, ತಾಯಿ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಆಕೆ ಹೇಳುವಂತೆ, ಬಾಲಕಿ ಸ್ಕೂಲಿನಿಂದ ಬೇಗ ಮನೆಗೆ ಬಂದಿದ್ದಳಂತೆ. ಅಂದು ತಾಯಿ ಬೇರೆ ವ್ಯಕ್ತಿಯ ಜೊತೆ ಕೆಟ್ಟ ಕೆಲಸದಲ್ಲಿ ತೊಡಗಿದ್ದಳಂತೆ. ಮಗಳಿಗೆ ಈ ಬಗ್ಗೆ ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದಳಂತೆ.

ತಾಯಿ ಜೊತೆ ಸಂಬಂಧ ಹೊಂದಿದ್ದವನ ಕೈ ಕೆಳಗೆ ಬಾಲಕಿಯ ತಂದೆ ಕೆಲಸ ಮಾಡುತ್ತಿದ್ದಾನೆ. ಒಂದು ದಿನ ಬಾಲಕಿಯ ಜೊತೆ ಕೆಟ್ಟದಾಗಿ ನಡೆದುಕೊಳ್ಳಲು ಆತ ಯತ್ನಿಸಿದ್ದಾನೆ. ಈ ವಿಷಯವನ್ನು ತಾಯಿ-ತಂದೆಗೆ ಹೇಳಿದ್ದಾಳೆ ಬಾಲಕಿ. ಆದ್ರೆ ತಂದೆ, ತಾಯಿ ಕೂಡ ಆತನ ಜೊತೆ ಹೋಗುವಂತೆ ಹೇಳಿದ್ದಾರೆ. ಆಗ ಬಾಲಕಿ ಸಹೋದರನ ಸಹಾಯ ಕೇಳಿದ್ದಾಳೆ. ಸಹೋದರ ವಿಡಿಯೋ ರೆಕಾರ್ಡ್ ಮಾಡುವ ಮೊಬೈಲ್ ನೀಡಿದ್ದಾರೆ. ತಂದೆ-ತಾಯಿ ಹಾಗೂ ಆತನ ವರ್ತನೆ ರೆಕಾರ್ಡ್ ಮಾಡಿ ಪೊಲೀಸರಿಗೆ ನೀಡಿದ್ದಾಳೆ ಬಾಲಕಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...