alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತಿರಾ…..

ರಾಜಸ್ತಾನದಲ್ಲಿ ಇಬ್ಬರು ದುರುಳರು ಅಪ್ರಾಪ್ತೆಯೊಬ್ಬಳನ್ನು ಅಪಹರಿಸಿರುವ ವಿಡಿಯೋ ವೈರಲ್ ಆಗಿದೆ. ಅಹ್ಮದ್ ಖಾನ್ ಎಂಬಾತ ತನ್ನ ಅಪ್ರಾಪ್ತ ಮಗಳನ್ನು ಶೌಕತ್ ಎಂಬಾತನಿಗೆ ಮದುವೆ ಮಾಡಿದ್ದ. ಬಾಲಕಿಗೆ ಇನ್ನೂ 18 ತುಂಬಿರಲಿಲ್ಲ. ಹಾಗಾಗಿ ತಾಯಿ, ಮಗಳನ್ನು ಕಳಿಸಿಕೊಡಲು ನಿರಾಕರಿಸಿದ್ದಾಳೆ.

ಇದರಿಂದ ಕೆರಳಿದ ವರ ತನ್ನ ಸ್ನೇಹಿತರ ಜೊತೆಗೂಡಿ ಬಾಲಕಿಯ ತಾಯಿಗೆ ಥಳಿಸಿದ್ದಾನೆ. ನಂತರ ಅವಳನ್ನು ಅಪಹರಿಸಿ ಕರೆದೊಯ್ದಿದ್ದಾನೆ. ಸೆಪ್ಟೆಂಬರ್ 11ರಂದು ಈ ಕೃತ್ಯ ನಡೆದಿದ್ದು, ಶೌಕತ್ ಟ್ರ್ಯಾಕ್ಟರ್ ನಲ್ಲಿ ಕೂರಿಸಿಕೊಂಡು ಬಾಲಕಿಯನ್ನು ಕರೆದೊಯ್ದಿದ್ದ.

ಬಾಲಕಿಯನ್ನು ಹೊತ್ತೊಯ್ಯುವ ಮುನ್ನ ಆಕೆಯ ತಾಯಿಗೆ ಥಳಿಸಿರುವ ದೃಶ್ಯ ಕೂಡ ರೆಕಾರ್ಡ್ ಆಗಿದೆ. ಹಾಡಹಗಲೇ ಈ ಭೀಕರ ಕೃತ್ಯ ನಡೆದಿದೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಅದರ ಬೆನ್ನಲ್ಲೇ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...