alex Certify
ಕನ್ನಡ ದುನಿಯಾ       Mobile App
       

Kannada Duniya

ಬೀದಿ ನಾಯಿ ಪಾಲಾಯ್ತು ಆಸ್ಪತ್ರೆಯಲ್ಲಿದ್ದ ಶಿಶುವಿನ ಶವ

ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯೊಂದರ ಹೆರಿಗೆ ವಿಭಾಗದಲ್ಲಿದ್ದ ನವಜಾತ ಶಿಶುವಿನ ಮೃತದೇಹವನ್ನು ಬೀದಿನಾಯಿ ಎಳೆದೊಯ್ದಿದೆ. ಆಸ್ಪತ್ರೆ ಸಿಬ್ಬಂದಿ ಮಾತ್ರ ಈ ಘಟನೆಯನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ನಾಯಿ, ಶಿಶುವನ್ನು ಕಚ್ಚಿಕೊಂಡು ಆಸ್ಪತ್ರೆಯ ಮುಖ್ಯದ್ವಾರದಿಂದ ಹೊರಹೋಗುತ್ತಿರುವುದನ್ನು ಅಟೆಂಡರ್ ಗಳು ಗಮನಿಸಿದ್ದಾರೆ.

ಕೂಡಲೇ ನಾಯಿಯನ್ನು ಓಡಿಸಿ, ಮಗುವಿನ ಶವವನ್ನು ವಾಪಸ್ ತಂದಿದ್ದಾರೆ ಅಂತಾ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಹಾತಮ್ ಎಂಬಾತನ ಪತ್ನಿ 35 ವರ್ಷದ ಶೀಲಾಗೆ ಗುರುವಾರ ಸಂಜೆ ವೇಳೆಗೆ ಹೆರಿಗೆಯಾಗಿತ್ತು. ಆದ್ರೆ ಕೆಲಹೊತ್ತಿನಲ್ಲೇ ಹೆಣ್ಣು ಮಗು ಮೃತಪಟ್ಟಿತ್ತು.

ಮಗುವಿನ ಶವವನ್ನು ರಗ್ ನಲ್ಲಿ ಸುತ್ತಿ ನೆಲದ ಮೇಲೆ ಮಲಗಿಸಲಾಗಿತ್ತು. ಶೀಲಾ ಕೂಡ ನಿದ್ದೆ ಹೋಗಿದ್ದಳು. ಈ ವೇಳೆ ಆಸ್ಪತ್ರೆಯೊಳಗೆ ನುಗ್ಗಿದ್ದ ಬೀದಿ ನಾಯಿ ನೆಲದ ಮೇಲೆ ಮಲಗಿಸಿದ್ದ ಮಗುವಿನ ಶವವನ್ನು ಎಳೆದೊಯ್ದಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...