alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಸ್ಥಾನದ ಸಿಸಿ ಟಿವಿಯಲ್ಲಿ ಸೆರೆಯಾಯ್ತು ಇಂಥ ದೃಶ್ಯ..!

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಪ್ರಸಿದ್ಧ ದೇವಸ್ಥಾನವೊಂದರಲ್ಲಿ ನಡೆದ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಮಥುರಾದ ರಾಧಾ-ರಾಣಿ ದೇವಸ್ಥಾನದಲ್ಲಿ ಇಬ್ಬರು ಕಾಮುಕರು ಮಹಿಳೆ ಮೇಲೆರಗಿದ್ದಾರೆ. ಈ ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಆದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ನಿರ್ಲಕ್ಷ್ಯವೂ ಬೆಳಕಿಗೆ ಬಂದಿದೆ.

ಒಡಿಶಾದ ಮಹಿಳೆಯೊಬ್ಬಳು ದೇವಾಲಯಕ್ಕೆ ಭೇಟಿ ನೀಡಿದ್ದಳು. ಸೋಮವಾರ ರಾತ್ರಿ ಅವಳು ರಾಧಾ-ರಾಣಿ ಮಂದಿರಕ್ಕೆ ಬಂದಿದ್ದಳು. ರಾತ್ರಿ ದೇವಸ್ಥಾನದಲ್ಲಿಯೇ ಉಳಿದಿದ್ದ ಮಹಿಳೆ ಮೇಲೆ ದೇವಸ್ಥಾನದ ಅಡುಗೆಯಾತ ಹಾಗೂ ಕಾವಲುಗಾರ ಅತ್ಯಾಚಾರವೆಸಗಿದ್ದಾರೆ.

ದೇವಸ್ಥಾನದ ಆವರಣದಲ್ಲಿರುವ ಕೋಣೆಯೊಂದಕ್ಕೆ ಮಹಿಳೆಯನ್ನು ಕರೆದೊಯ್ದ ಆರೋಪಿಗಳು ಅತ್ಯಾಚಾರವೆಸಗಿದ್ದಾರೆ. ಇಬ್ಬರಿಂದ ಹೇಗೋ ತಪ್ಪಿಸಿಕೊಂಡು ಬಂದ ಮಹಿಳೆ ಪೊಲೀಸರ ಬಳಿ ಹೋಗಿದ್ದಾಳೆ. ಆದ್ರೆ ಸರಿಯಾಗಿ ವಿಚಾರಣೆ ನಡೆಸದ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಮಹಿಳೆ ಮಾದ್ಯಮಗಳ ಮುಂದೆ ಹೋಗ್ತಿದ್ದಂತೆ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ. ಸಿಸಿ ಟಿವಿಯಲ್ಲಿ ಮಹಿಳೆಯನ್ನು ಹೊತ್ತೊಯ್ದ ದೃಶ್ಯ ಸೆರೆಯಾಗಿದೆ. ಆಡಳಿತ ಮಂಡಳಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...