alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಂಡತಿಗೆ 3 ಲಕ್ಷ ರೂ. ನೀಡಲು ವೈದ್ಯೆ ಹತ್ಯೆ ಮಾಡಿದ…!

ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ 10 ದಿನಗಳ ಹಿಂದೆ ನಡೆದ ಪಿಜಿಯೋಥೆರಪಿಸ್ಟ್ ಕೊಲೆ ಪ್ರಕರಣವನ್ನು ಪೊಲೀಸರು ಬಯಲು ಮಾಡಿದ್ದಾರೆ. ಪಿಜಿಯೋಥೆರಪಿಸ್ಟ್ ಹತ್ಯೆ ಆರೋಪದ ಮೇಲೆ ರವೀಂದ್ರ ಎಂಬಾತನನ್ನು ಬಂಧಿಸಿದ್ದಾರೆ. ಪತ್ನಿ ಷರತ್ತಿನ ಮೇಲೆ ರವೀಂದ್ರ ಈ ಕೆಲಸಕ್ಕೆ ಕೈ ಹಾಕಿದ್ದ ಎಂಬುದು ಬಹಿರಂಗವಾಗಿದೆ.

ರವೀಂದ್ರನ ಪತ್ನಿ 3 ಲಕ್ಷ ರೂಪಾಯಿ ದುಡಿದು ತರುವಂತೆ ಷರತ್ತು ವಿಧಿಸಿದ್ದಳು. ಜುಲೈ 31ರಂದೇ ಆಕೆ ಮನೆ ಬಿಟ್ಟು ಹೋಗಿದ್ದಳು. ಪತ್ನಿ ಷರತ್ತು ಪೂರೈಸಲು ಮುಂದಾದ ರವೀಂದ್ರ ಏಳು ಬಾಟಲಿ ಬಿಯರ್ ಕುಡಿದಿದ್ದಾನೆ. ಲಿವರ್ ಸಮಸ್ಯೆಯಿರುವ ರವೀಂದ್ರ ನಂತ್ರ ಐಷಾರಾಮಿ ಕಾಲೋನಿಗೆ ಸುಮಾರು 3 ಕಿಲೋಮೀಟರ್ ನಡೆದು ಬಂದಿದ್ದಾನೆ.

ಸುಮಾರು 2 ಗಂಟೆಗಳ ಕಾಲ ಪಿಜಿಯೋಥೆರಪಿಸ್ಟ್ ಮನೆ ಮುಂದೆ ನಿಂತಿದ್ದನಂತೆ. ಮನೆಯಲ್ಲಿ ಯಾರೂ ಪುರುಷರಿಲ್ಲ ಎಂಬುದು ತಿಳಿದ ಮೇಲೆ ಮನೆಯೊಳಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದರಿಂದ ಆಕೆ ಕತ್ತು ಕತ್ತರಿಸಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...