alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪಾ, ಪಾರ್ಲರ್ ಗಳಲ್ಲಿ ನಡೆಯುತ್ತಿದೆ ವೇಶ್ಯಾವಾಟಿಕೆ

parlour

ಭಾರತದಲ್ಲಿ ಮಸಾಜ್ ಪಾರ್ಲರ್ ಹಾಗೂ ಸ್ಪಾಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರ ಜೊತೆಜೊತೆಗೆ ಥೈಲ್ಯಾಂಡ್ ನ ಯುವತಿಯರಿಗೂ ಡಿಮ್ಯಾಂಡ್ ಹೆಚ್ಚುತ್ತಿದೆ ಎನ್ನುತ್ತಿವೆ ಮೂಲಗಳು. ಪಾರ್ಲರ್ ಮತ್ತು ಸ್ಪಾಗಳಲ್ಲಿ ಥೈಲ್ಯಾಂಡ್ ಯುವತಿಯರನ್ನು ವೇಶ್ಯಾವಾಟಿಕೆಗಾಗಿ ಬಳಸಿಕೊಳ್ಳಲಾಗ್ತಿದೆ.

ಮುಂಬೈ ಮತ್ತು ಬೆಂಗಳೂರಲ್ಲಿ ಥಾಯ್ ಬೆಡಗಿಯರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆಯಂತೆ. ಹಾಗಾಗಿ ಥೈಲ್ಯಾಂಡ್ ನಿಂದ ಯುವತಿಯರನ್ನು ಆಮಿಷವೊಡ್ಡಿ ಭಾರತಕ್ಕೆ ಕರೆತರುವ ದಂಧೆಯೇ ನಡೆಯುತ್ತಿದೆ. ಕಳೆದ 6 ತಿಂಗಳುಗಳಲ್ಲಿ ಬೆಂಗಳೂರು, ಮುಂಬೈ ಮತ್ತು ಪುಣೆಯಲ್ಲಿ 40ಕ್ಕೂ ಹೆಚ್ಚು ಥಾಯ್ ಯುವತಿಯರನ್ನು ರಕ್ಷಣೆ ಮಾಡಲಾಗಿದೆ.

ಎಲ್ಲರೂ ಮಸಾಜ್ ಪಾರ್ಲರ್ ಹೆಸರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಇಂತಹ ಹಲವಾರು ಸ್ಪಾ ಮತ್ತು ಪಾರ್ಲರ್ ಗಳನ್ನು ಪೊಲೀಸರು ಈಗಾಗ್ಲೇ ಪತ್ತೆ ಮಾಡಿದ್ದಾರೆ. ದುಪ್ಪಟ್ಟು ಹಣ ಕೊಡುವುದಾಗಿ ಆಮಿಷವೊಡ್ಡಿ ಮಹಿಳೆಯರನ್ನು ಭಾರತಕ್ಕೆ ಕರೆತರಲಾಗುತ್ತಿದೆ.

ಎಲ್ಲರೂ 25-40 ವರ್ಷ ವಯಸ್ಸಿನವರು. ನಾಲ್ಕಾರು ತಿಂಗಳಲ್ಲಿ 1 ಲಕ್ಷ ರೂಪಾಯಿ ಸಂಪಾದನೆ ಮಾಡ್ತಿದ್ದಾರಂತೆ. ಅನಕ್ಷರಸ್ಥ ಮತ್ತು ಬಡ ಯುವತಿಯರನ್ನೇ ದಂಧೆಕೋರರು ಟಾರ್ಗೆಟ್ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...